HEALTH TIPS

`ಕ್ಯಾಲಿಫೋರ್ನಿಯಾ ಇರಾನ್‍ನ ಹೊಸ ಪ್ರಾದೇಶಿಕ ಭಾಗ' : ಅಮೆರಿಕ ವಿರುದ್ಧ ನಕ್ಷೆ ಸಮರ ತೀವ್ರಗೊಳಿಸಿದ ಇರಾನ್

ಟೆಹರಾನ್: ಸಾಮಾಜಿಕ ಜಾಲತಾಣದಲ್ಲಿದ್ದ ಇರಾನ್‍ನ ಅಧಿಕೃತ ರಾಜತಾಂತ್ರಿಕ ಖಾತೆಯೊಂದು ಕ್ಯಾಲಿಫೋರ್ನಿಯಾವನ್ನು `ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‍ನ ಹೊಸ ಪ್ರಾದೇಶಿಕ ಭಾಗ' ಎಂದು ಮಂಗಳವಾರ ಗುರುತಿಸಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪ್ರಮುಖ ಹಾರ್ಮುಝ್ ಜಲಸಂಧಿಯ ಜಲಮಾರ್ಗವನ್ನು `ಅಮೆರಿಕದ ಹೊಸ ಪ್ರಾದೇಶಿಕ ಭಾಗ ಎಂದು ಚಿತ್ರಿಸುವ ಗ್ರಾಫಿಕ್ ವೊಂದನ್ನು ಹಂಚಿಕೊಂಡ ನಂತರ ಇರಾನ್ ಈ ತಿರುಗೇಟು ನೀಡಿದೆ. 


ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಾರ್ಮುಝ್ ಜಲಸಂಧಿಯ ನಕ್ಷೆಯ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಹಾರ್ಮುಝ್ ಜಲಮಾರ್ಗವನ್ನು ವೃತ್ತಾಕಾರವಾಗಿ ಗುರುತಿಸಿ, `ಅಮೆರಿಕದ ಹೊಸ ಪ್ರಾದೇಶಿಕ ಭಾಗ' ಎಂದು ಹೆಸರಿಸಿದ್ದರು. ನಂತರ ಶ್ವೇತಭವನದ ಎಕ್ಸ್ ಖಾತೆಯು ಈ ಚಿತ್ರವನ್ನು ಮರುಪೋಸ್ಟ್ ಮಾಡಿತ್ತು.

ಇದಕ್ಕೆ ತಿರುಗೇಟು ನೀಡಿರುವ ಹೈದರಾಬಾದ್‍ನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್, ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಮೆರಿಕದ ನಕ್ಷೆಯನ್ನು ಪೋಸ್ಟ್ ಮಾಡಿ, ಅದರಲ್ಲಿ ಕ್ಯಾಲಿಫೋರ್ನಿಯಾವನ್ನು ನೀಲಿ ಬಣ್ಣದಲ್ಲಿ ಎದ್ದು ಕಾಣುವಂತೆ ಗುರುತಿಸಿ, ಅದನ್ನು ಇರಾನ್‍ನ ಪ್ರಾದೇಶಿಕ ಭಾಗವೆಂದು ಹಕ್ಕು ಸಾಧಿಸುವ ಶೀರ್ಷಿಕೆಯನ್ನು ಹಾಕಿದೆ.

ವಿಶ್ವದಲ್ಲೇ ಅತಿ ಹೆಚ್ಚು ಇರಾನಿಯನ್ ವಲಸಿಗರು ವಾಸಿಸುತ್ತಿರುವುದು ಕ್ಯಾಲಿಫೋರ್ನಿಯಾದಲ್ಲಿ. ಮುಖ್ಯವಾಗಿ ಲಾಸ್ ಎಂಜಲಿಸ್ ಕೌಂಟಿಯಲ್ಲಿ ಅಂದಾಜು 1,41,000 ಇರಾನಿಯನ್ ಅಮೆರಿಕನ್ನರು ನೆಲೆಸಿದ್ದಾರೆ. ಲಾಸ್ ಎಂಜಲಿಸ್‍ನ ವೆಸ್ಟ್‌ವುಡ್‌ ಪ್ರದೇಶವನ್ನು `ಟೆಹ್ರಾಂಗೆಲೆಸ್' ಎಂದೂ ಕರೆಯಲಾಗುತ್ತದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‍ನಿಂದ ಬಂದ ವಲಸಿಗರಿಗೆ ಈ ಪ್ರದೇಶವು ಪ್ರಮುಖ ಕೇಂದ್ರವಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries