ಕಾಸರಗೋಡು: ಜಿಲ್ಲೆಯಲ್ಲಿ ಹೊಸದಾಗಿ ಮಂಜೂರಾದ 10 ಪ್ಲಸ್ ಒನ್ ಬ್ಯಾಚ್‍ಗಳ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಸಚಿವ ಅಡ್ವ. ಎನ್. ಶಂಸುದ್ದೀನ್ ನಿನ್ನೆ ಮೊಗ್ರಾಲ್ ಪುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನೆರವೇರಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಂದೀಪ್ ವಾರಿಯರ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲ ಕುಂಞÂ ಚೆರ್ಕಳ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎ. ಅಬ್ದುಲ್ಲ ಕುಂಞÂ, ಜಿಲ್ಲಾ ಪಂಚಾಯತಿ ವಿಭಾಗ ಸದಸ್ಯ ಪಿ.ಬಿ. ಶಫೀಕ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅರ್ಫಾನಾ ನಜೀಬ್, ಗ್ರಾಮ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಫೌಜಿಯಾ ಜೈನುದ್ದೀನ್, ಬ್ಲಾಕ್ ಪಂಚಾಯಿತಿ ವಿಭಾಗದ ಸದಸ್ಯೆ ಜೋಯಾ ಲತೀಫ್, ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯೆ ಮಶಿತಾ ಮಹಮ್ಮದ್, ಪಿಟಿಎ ಅಧ್ಯಕ್ಷ ನೆಹರು ಕಡವತ್, ಎಸ್.ಎಂ.ಸಿ ಅಧ್ಯಕ್ಷ ಮಹ್ಮದ್ ಬಳ್ಳೂರು, ಮದರ್ ಪಿ.ಟಿ.ಎ ಅಧ್ಯಕ್ಷೆ ಫೌಜಿಯಾ, ಪಿ.ಟಿ.ಎ ಉಪಾಧ್ಯಕ್ಷೆ ಖಾದರ್, ಎಸ್.ಎಂ.ಸಿ. ಸಂಯೋಜಕ ಡಾಮಿನಿಕ್ ಆಗಸ್ಟಿನ್, ಕಾಸರಗೋಡು ಡಿಇಒ ಪಿ.ಸವಿತಾ, ಕಾಸರಗೋಡು ಎಇಒ ಎಂ.ಶಶಿಧರ್, ಜಿಎಚ್‍ಎಸ್‍ಎಸ್ ಮೊಗ್ರಾಲ್ ಪುತ್ತೂರು ಮುಖ್ಯೋಪಾಧ್ಯಾಯಿನಿ ಎಂ.ರಾಧಾಲಕ್ಷ್ಮಿ ಮಾತನಾಡಿದರು.
ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಆಲಂಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ವಿ.ಪಿ.ಪಿ.ಎಂ. ಕೆ.ಪಿ.ಎಸ್. ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ತೃಕರಿಪುರ, ಚೆಮ್ಮನಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ವಿ.ಕೆ.ಪಿ. ಎಚ್.ಎಂ.ಎಂ. ಎಚ್.ಎಸ್.ಎಸ್. ಪಡನ್ನ, ವಿ.ಕೆ.ಎನ್.ಎಸ್. ಎಚ್.ಎಸ್.ಎಸ್. ವರಕ್ಕಾಡ್, ಮತ್ತು ಬಿ.ಎ.ಆರ್. ಎಚ್.ಎಸ್.ಎಸ್. ಬೋವಿಕ್ಕಾನ ಶಾಲೆಗಳು ಸಚಿವರಿಂದ ಹೆಚ್ಚುವರಿ ಪ್ಲಸ್ ಒನ್ ಬ್ಯಾಚ್ ಅನುಮತಿಯನ್ನು ಪಡೆದರು. ಎಚ್.ಎಸ್.ಇ. ಪ್ರಾದೇಶಿಕ ಉಪನಿರ್ದೇಶಕ ವಿನೋದ್ ಕುಮಾರ್ ಸ್ವಾಗತಿಸಿ, ಮೊಗ್ರಾಲ್ ಪುತ್ತೂರು ಜಿಎಚ್‍ಎಸ್‍ಎಸ್‍ನ ಪ್ರಭಾಲ ಪ್ರಾಂಶುಪಾಲ ಆರ್. ರಘು ವಂದಿಸಿದರು.




