ಕಾಸರಗೋಡು: ಚೆಂಗಳ ಗ್ರಾಮ ಪಂಚಾಯತ್‍ನ ಸಿ.ಎಫ್.ಸಿ ನಿಧಿಯನ್ನು ಬಳಸಿಕೊಂಡು ಎರ್ದುಕಡವು ಜಿ.ಎಲ್.ಪಿ. ಶಾಲೆಯಲ್ಲಿ ಪ್ರಾರಂಭವಾದ ಸಂವಾದಾತ್ಮಕ ತರಗತಿ ಫಲಕವನ್ನು ಸಾರ್ವಜನಿಕ ಶಿಕ್ಷಣ ಸಚಿವ ಅಡ್ವ. ಎನ್. ಶಂಸುದ್ದೀನ್ ನಿನ್ನೆ ಉದ್ಘಾಟಿಸಿದರು. ಎರ್ದುಕಡವು ಶಾಲೆಯಲ್ಲಿ ಸಂವಾದಾತ್ಮಕ ತರಗತಿ ಫಲಕವನ್ನು ಉತ್ತಮ ರೀತಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಇದು ಹೊಸ ಯುಗದ ಅತ್ಯಂತ ಪ್ರಮುಖ ಯೋಜನೆಯಾಗಿದೆ ಎಂದು ಸಚಿವರು ಹೇಳಿದರು.
ಶಾಲೆಗೆ ಯೋಜನೆಯನ್ನು ಒದಗಿಸಿದ್ದಕ್ಕಾಗಿ ಚೆಂಗಳ ಗ್ರಾಮ ಪಂಚಾಯತಿ, ಶಾಲೆಯ ಶಿಕ್ಷಕರು ಮತ್ತು ಪಿಟಿಎ ಕಾರ್ಯಕರ್ತರನ್ನು ಸಚಿವರು ಅಭಿನಂದಿಸಿದರು. ಶಾಲೆಗಳ ಕಾರ್ಯನಿರ್ವಹಣೆಯು ಆಧುನಿಕ ಮತ್ತು ಪರಿಣಾಮಕಾರಿಯಾಗಿರಬೇಕು. ಆಗ ಮಾತ್ರ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬಹುದು. ಕಾಲವು ದೊಡ್ಡ ಬದಲಾವಣೆಗಳ ಮೂಲಕ ಸಾಗುತ್ತಿದೆ. ನಮ್ಮ ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಜ್ಞಾನವನ್ನು ಸಹ ಪಡೆಯಬೇಕು. ಎಲ್‍ಪಿ ಶಾಲೆಯನ್ನು ಯುಪಿ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಪಂಚಾಯತ್ ಅಧ್ಯಕ್ಷರು ಮಾಡಿದ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಶಾಸಕ ಕಲ್ಲಟ್ರ ಮಾಹಿನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲ ಕುಂಞÂ, ಚೆಂಗಳ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಾಸ್ಮಿನ್ ಕಬೀರ್, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾರಯ ಶುಕ್ಕೂರು ಚೆರ್ಕಳ, ಇಕ್ಬಾಲ್ ಚೇರೂರು, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಸಕೀನಾ ಅಬ್ದುಲ್ಲ, ಕಾಸರಗೋಡು ಎಇಒ ಎಂ.ಶಶಿಧರ, ಡಯಟ್ ಅಧ್ಯಾಪಕರಾದ ಬಿ.ಪಿ.ಆರ್.ಸಿ. ಸೌಮ್ಯಾ, ವಾರ್ಡ್ ಸದಸ್ಯ ಇ.ಎ. ಮಹ್ಮದ್, ಎಸ್‍ಎಂಸಿ ಅಧ್ಯಕ್ಷ ಜಲೀಲ್ ಎರ್ದುಕಡವು, ಪಿಟಿಎ ಅಧ್ಯಕ್ಷ ಪಿ.ಎಹನೀಫ, ಉಪಾಧ್ಯಕ್ಷ ಮಹಮ್ಮದ್ ರಫೀಕ್, ªಪಿಟಿಎ ಅಧ್ಯಕ್ಷೆ ಫಾತಿಮತ್ ಸಫೀರ, ಮಾಜಿ ಅಧ್ಯಕ್ಷ ಅಶ್ರಫ್ ಸೊಂಗಾಲ್, ಪೂರ್ವ ಪ್ರಾಥಮಿಕ ಸಂಯೋಜಕ ಹಮೀದ್ ಬಾರಿಕಾಡ್, ಮುಖ್ಯ ಶಿಕ್ಷಕಿ ಜಾಕ್ವೆಲಿನ್ ರೀನಾ ಮತ್ತಿತರರು ಮಾತನಾಡಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕೋಡ್ ಸ್ವಾಗತಿಸಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಕುಮಾರಿ ಟೀಚರ್ ವಂದಿಸಿದರು.




