HEALTH TIPS

ಬೇರೆಯವರಿಗಾಗಿ ದುಡಿಯುತ್ತಿದ್ದೇನೆ: ₹1.14ಕೋಟಿ ತೆರಿಗೆ ಪಾವತಿಸಿದ ವ್ಯಕ್ತಿಯ ಅಳಲು

ನವದೆಹಲಿ: ಈ ವರ್ಷ ಬರೋಬ್ಬರಿ ₹1.14 ಕೋಟಿ ಆದಾಯ ತೆರಿಗೆ ಪಾವತಿಸಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬರು ಬಹಿರಂಗಪಡಿಸಿದ್ದಾರೆ. ಈ ಭಾರಿ ತೆರಿಗೆ ಹೊರೆಯಿಂದಾಗಿ, 'ನಾನೀಗ ನನಗಾಗಿ ಗಳಿಸುತ್ತಿಲ್ಲ, ಬದಲಿಗೆ ಬೇರೆಯವರಿಗಾಗಿ ದುಡಿಯುತ್ತಿದ್ದೇನೆ' ಎಂಬ ಭಾವನೆ ಮೂಡುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 


ಸಾಮಾಜಿಕ ಜಾಲತಾಣ ಎಕ್ಸ್‌ ನ '@poojaofficial5' ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ, ವ್ಯಕ್ತಿ ಆದಾಯ ತೆರಿಗೆ ಪಾವತಿಸಿದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಒಟ್ಟು ₹1.14 ಕೋಟಿ ತೆರಿಗೆ ಪಾವತಿಸಿರುವುದು ಕಾಣಿಸುತ್ತದೆ.

ಅಮೆರಿಕದ ಉದ್ಯೋಗ ಆಫರ್ ತಿರಸ್ಕಾರ

ಅಮೆರಿಕದಿಂದ ಹಲವು ಉದ್ಯೋಗಾವಕಾಶಗಳು ಬಂದಿದ್ದರೂ, ಪೋಷಕರನ್ನು ನೋಡಿಕೊಳ್ಳಲು ಭಾರತದಲ್ಲೇ ಉಳಿಯಲು ನಿರ್ಧರಿಸಿರುವುದಾಗಿ ಈ ತೆರಿಗೆದಾರ ಹೇಳಿಕೊಂಡಿದ್ದಾರೆ. ದೇಶ ಬಿಡುವ ಯಾವುದೇ ಆಲೋಚನೆ ಇಲ್ಲದಿದ್ದರೂ, ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ನೀಡುವ ಪ್ರಾಮಾಣಿಕ ತೆರಿಗೆದಾರರ ಕಳಕಳಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಇಷ್ಟೊಂದು ತೆರಿಗೆ ಕಟ್ಟುವ ಜನರಿಗೆ ಸರ್ಕಾರದಿಂದ ಉತ್ತಮ ಆಡಳಿತ ಮತ್ತು ಉತ್ತಮ ಮೂಲಸೌಕರ್ಯಗಳು ಸಿಗುತ್ತಿವೆಯೇ ಎಂಬುದರ ಕುರಿತು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. ಜೊತೆಗೆ ತೆರಿಗೆ ನೀತಿಗಳು ಮತ್ತು ವೇತನದಾರರ ಮೇಲೆ ಬೀಳುತ್ತಿರುವ ತೆರಿಗೆಯ ಹೊರೆಯ ಬಗ್ಗೆಯೂ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವವರು ಹೆಚ್ಚಿನ ಹೊರೆ ಹೊರಬೇಕಾಗುತ್ತದೆ. ಹಾಗಾಗಿ ಅವರಿಗೆ ಉತ್ತಮ ಸೇವೆ ಮತ್ತು ಸೌಲಭ್ಯಗಳು ಸಿಗಬೇಕು. ದೇಶದ ಅಭಿವೃದ್ಧಿಗೆ ತೆರಿಗೆ ಅಗತ್ಯ, ಆದರೆ ಅದಕ್ಕೆ ಪ್ರತಿಯಾಗಿ ನಾವು ಕಟ್ಟುವ ಹಣಕ್ಕೆ ತಕ್ಕಂಕೆ ಉತ್ತಮ ಸೇವೆ ಸಿಗುವುದು ಅಷ್ಟೇ ಮುಖ್ಯ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ತೆರಿಗೆ ಪಾವತಿಸುವುದು ನಮ್ಮ ಕರ್ತವ್ಯ. ಆದರೆ ತೆರಿಗೆದಾರರು ಪಾರದರ್ಶಕತೆ, ಉತ್ತಮ ಸೇವೆ ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತಾರೆ. ಇಲ್ಲಿ ಸಮಸ್ಯೆಯಿರುವುದು ತೆರಿಗೆ ಮೊತ್ತದಲ್ಲಲ್ಲ. ಬದಲಿಗೆ ತೆರಿಗೆದಾರರು ಪಾವತಿಸುವ ಹಣಕ್ಕೆ ಸೂಕ್ತ ಮೌಲ್ಯ ಸಿಗುತ್ತಿದೆಯೇ ಎಂಬುದು ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಏಳಿಗೆ ಮತ್ತು ಜನರ ಕಲ್ಯಾಣಕ್ಕೆ ತೆರಿಗೆ ಅತ್ಯಗತ್ಯ. ಅಂತೆಯೇ ತೆರಿಗೆದಾರರು ಹೆಚ್ಚಿನ ಹೊಣೆಗಾರಿಕೆಯನ್ನು ಸಹ ನಿರೀಕ್ಷಿಸುತ್ತಾರೆ. ಕೊಡುಗೆ ಮತ್ತು ಪ್ರಯೋಜನಗಳ (ನಾವು ಪಾವತಿಸುವ ತೆರಿಗೆ ಮತ್ತು ನಮಗೆ ಸಿಗುವ ಸೌಲಭ್ಯ) ನಡುವೆ ನ್ಯಾಯಯುತ ಸಮತೋಲನ ಮುಖ್ಯ ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.


https://twitter.com/poojaofficial5




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries