ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿರುವ ಎಥೆಲ್ ಕ್ಯಾಟರ್‌ಹ್ಯಾಮ್ ಅವರು ಬ್ರಿಟನ್‌ನ ಸರ್ರೆ (Suಡಿಡಿeಥಿ) ಎಂಬಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ 117ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
2025 ಏಪ್ರಿಲ್‌ನಲ್ಲಿ ಬ್ರೆಜಿಲ್‌ನ ಸನ್ಯಾಸಿನಿ ಇನಾ ಕೆನಬಾರೊ ಲೂಕಾಸ್ (116 ವರ್ಷ) ಅವರ ನಿಧನದ ನಂತರ ಎಥೆಲ್ ಅವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಚಾರಿತ್ರಿಕ ಘಟನೆಗಳಿಗೆ ಸಾಕ್ಷಿ: ಟೈಟಾನಿಕ್ ದುರಂತಕ್ಕಿಂತ ಮೂರು ವರ್ಷ ಮೊದಲು (1909ರಲ್ಲಿ) ಜನಿಸಿದ ಇವರು, ರಷ್ಯನ್ ಕ್ರಾಂತಿ ಹಾಗೂ ಎರಡೂ ಜಾಗತಿಕ ಯುದ್ಧದ ಸಮಯವನ್ನು ಕಂಡಿದ್ದಾರೆ. ಇವರು ರಾಜ ಏಳನೇ ಎಡ್ವರ್ಡ್ ಕಾಲದಲ್ಲಿ ಜನಿಸಿದವರು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, 2020ರಲ್ಲಿ ತಮ್ಮ 110ನೇ ವಯಸ್ಸಿನಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಇವರು, ಅದನ್ನು ಯಶಸ್ವಿಯಾಗಿ ಗೆದ್ದು ಬಂದ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ವೈಯಕ್ತಿಕ ಜೀವನ: ಹ್ಯಾಂಪ್‌ಶೈರ್‌ನ ಶಿಪ್ಟನ್ ಬೆಲ್ಲಿಂಗರ್‌ನಲ್ಲಿ ಜನಿಸಿದ ಇವರು 1927ರಲ್ಲಿ ಭಾರತದಲ್ಲಿ ಮಿಲಿಟರಿ ಕುಟುಂಬವೊಂದರಲ್ಲಿ ಸಹಾಯಕಿಯಾಗಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ನಂತರ ಬ್ರಿಟಿಷ್ ಸೇನಾಧಿಕಾರಿ ನಾರ್ಮನ್ ಅವರನ್ನು ಮದುವೆಯಾಗಿ, ಹಾಂಕಾಂಗ್‌ನಲ್ಲಿ ನರ್ಸರಿ ಶಾಲೆಯನ್ನು ನಡೆಸುತ್ತಿದ್ದರು.
ದೀರ್ಘಾಯುಷಿ ಕುಟುಂಬ: ಇವರ ಸಹೋದರಿ ಗ್ಲಾಡಿಸ್ ಬಾಬಿಲಾಸ್ ಕೂಡ 104 ವರ್ಷಗಳ ಕಾಲ ದೀರ್ಘಾಯುಷಿಯಾಗಿ ಬದುಕಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಸ್ತುತ ಎಥೆಲ್ ಅವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರೂ, ಇತಿಹಾಸದಲ್ಲೇ ಅತ್ಯಂತ ಹೆಚ್ಚು ಕಾಲ ಬದುಕಿದ ವ್ಯಕ್ತಿ ಎಂಬ ದಾಖಲೆ ಫ್ರಾನ್ಸ್‌ನ ಜೀನ್ ಕಾಲ್ಮೆಂಟ್ ಅವರ ಹೆಸರಿನಲ್ಲಿದೆ (ಇವರು 1997ರಲ್ಲಿ ತಮ್ಮ 122ನೇ ವಯಸ್ಸಿನಲ್ಲಿ ನಿಧನರಾದರು).

