HEALTH TIPS

13 ರಿಂದ 16 ರವರೆಗೆ ಕುಂಬಳೆಯಲ್ಲಿ ಹಲಸಿನ ಹಣ್ಣು ಉತ್ಸವ ಮತ್ತು ಸ್ಥಳೀಯ ಆಹಾರೋತ್ಸವ-ಸಂಘಟಕರಿಂದ ಮಾಹಿತಿ

ಕುಂಬಳೆ: ಕರ್ನಾಟಕ ರಾಜರಾಜೇಶ್ವರಿ ಆಶ್ರಯದಲ್ಲಿ ಹಲಸು ಉತ್ಸವ ಮತ್ತು ಸ್ಥಳೀಯ ಆಹಾರ ಉತ್ಸವ ಆ. 13 ರಿಂದ 16 ರವರೆಗೆ ಕುಂಬಳೆ ಗೋಪಾಲಕೃಷ್ಣ ಸಭಾ ಮಂಟಪದಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ 13 ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಲಸಿನ ವೈವಿಧ್ಯಮಯ ಭಕ್ಷ್ಯಗಳನ್ನು ಉತ್ತೇಜಿಸುವ ಮತ್ತು ಸ್ಥಳೀಯ ಆಹಾರ ಭಕ್ಷ್ಯಗಳ ಮಹತ್ವಿಕೆಯನ್ನು ಪರಿಚಯಿಸುವ ಉದ್ದೇಶದಿಂದ ನಾಲ್ಕು ದಿನಗಳ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ವಿಶಿಷ್ಟವಾದ ಸ್ಥಳೀಯ ತಿಂಡಿಗಳು ಉತ್ಸವದಲ್ಲಿ ಲಭ್ಯವಿರುತ್ತವೆ. ಸ್ಥಳೀಯ ಆಹಾರ ಭಕ್ಷ್ಯಗಳನ್ನು ಕರಗತ ಮಾಡಿಕೊಂಡ ಸ್ಥಳೀಯರಿಗೆ ಸ್ವ ಉದ್ಯೋಗ ಅವಕಾಶಗಳನ್ನು ಒದಗಿಸುವುದು ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಉತ್ಸವದ ಉದ್ದೇಶವಾಗಿದೆ ಎಂದು ಸಂಘಟಕರು ಹೇಳಿದರು.

ಹಲಸಿನ ಹಣ್ಣಿನ ಹೋಳಿಗೆ, ಹಲಸಿನ ಹಣ್ಣು ಜಿಲೇಬಿ, ಹಲಸಿನ ಹಣ್ಣು ಐಸ್ ಕ್ರೀಮ್ ಮತ್ತು ಹಲಸಿನ ಹಣ್ಣಿನ ರಸ ಸಹಿತ ಸ್ಥಳೀಯ ಮಸಾಲೆಗಳು, ಕೈಮಗ್ಗ ಸೀರೆಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದವರು ಮಾಹಿತಿ ನೀಡಿದರು.

ರಾಜರಾಜೇಶ್ವರಿ ಸಂಘಟಕರಾದ ಗಣೇಶ್ ಬಿ.ಸಿ.ರೋಡ್ ಮತ್ತು ಅಶ್ವಿನಿ ಮೈಸೂರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಸಾರ್ವಜನಿಕರ ಬೆಂಬಲ ಕೋರಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries