ಕಾಸರಗೋಡು: ಕಾಲಿಕ್ಕಡವಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ಪ್ರಮುಖ ಸೂತ್ರಧಾರ ಎರ್ನಾಕುಳಂ ನಿವಾಸಿ ಆಬಿದ್ ಎಂಬಾತನನ್ನು ಎರ್ನಾಕುಳಂನಿಂದ ಪೊಲೀಸರು ಸೆರೆಹಿಡಿದಿದ್ದಾರೆ. ಈತನನ್ನು ಚೆಂಡೇರ ಠಾಣೆಗೆ ತಲುಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಪೆರುಂಬಾವೂರ್ ಅರಕ್ಕಪೆÇ್ಪಡಿ ನಿವಾಸಿಗಳಾದ ಪಿ.ಎ. ಅಬ್ದುಲ್ ಸಲಾಂ (27), ಕೆ.ಎಚ್. ಮುಹಮ್ಮದ್ ಹುಸೇನ್ (28), ಪಿ.ಎ. ಅಬ್ಬಾಸ್ (50) ಎಂಬಿವರನ್ನು ಭಾನುವಾರ ಬಂಧಿಸಲಾಗಿತ್ತು.
ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ ರಹಸ್ಯಮಾಹಿತಿಯನ್ವಯ 'ಡಾನ್ಸಾಪ್'ವಿಶೇಷಚ ತಂಡ ಹಾಗೂ ಚಂದೇರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಇವರನ್ನು ವಿಚಾರಣೆಗೊಳಪಡಿಸಿದಾಗ ಆಬಿದ್ ಮಾದಕ ವಸ್ತು ಸಾಗಾಟದ ಸೂತ್ರಧಾರ ಎಂಬ ಮಾಹಿತಿ ಪೆÇಲೀಸರಿಗೆ ಲಭಿಸಿತ್ತು.


