ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಲಕ್ ನಗರ ನಿವಾಸಿ ಸುಭೋದಯ ಎಂಬವರ ಪುತ್ರಿ ಕಾಜಲ್ (25) ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 5ರಂದು ಬೆಳಿಗ್ಗೆ 10ಕ್ಕೆ ಮನೆಯಿಂದ ಹೊರಟಿದ್ದ ಈಕೆ ನಂತರ ಮನೆಗೆ ವಾಪಸಾಘಿಲ್ಲ ಎಂದು ಕಾಜಲ್ ಸಹೋದರಿ ದೀಪ್ತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಜಲ್ ವಿವಾಹಿತೆಯಾಗಿದ್ದು ಒಂದು ಮಗುವನ್ನೂ ಹೊಂದಿದ್ದಾಳೆ. ನಾಪತ್ತೆಯಾದ ಬಳಿಕ ಆಕೆ ಮನೆಯವರನ್ನುಮೊಬೈಲಲ್ಲಿ ಸಂಪರ್ಕಿಸಿ ಮಗುವನ್ನು ಕರೆದುಕೊಂಡು ಬರುವುದಾಗಿ ಆಕೆ ತಿಳಿಸಿದ್ದು, ಆನಂತರ ಆಕೆಯ ಮೊಬೈಲ್ ಫೆÇೀನ್ ಸ್ವಿಚ್ ಆಫ್ ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


