ಕಾಸರಗೋಡು: ಬಾಲಕ ಸೇರಿದಂತೆ ಒಂದೇ ಕುಟುಂಬದ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೆÇಲೀಸರು ನಾಲ್ಕುಮಂದಿಯನ್ನು ಬಂಧಿಸಿದ್ದಾರೆ. ಕಾಸರಗೋಡು ಕೊರಕೋಡು ನಿವಾಸಿಗಳಾದ ಇಮ್ರಾನ್, ತಳಂಗರೆ ಬಾಂಗೋಡಿನ ಸಫಾಫ್, ಕೊರಕ್ಕೋಡಿನ ಅಹಮ್ಮದ್ ಮತ್ತು ಬಾಂಗೋಡಿನ ಬಾಸಿತ್ ಬಂಧಿತರು. ಇವರ ವಿರುದ್ಧ ಪೆÇಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕರೊಕ್ಕೋಡಿನ ಬಿಲಾಲ್ ಮಸೀದಿ ಸನಿಹದ ನಿವಾಸಿಗಳಾದ ಬಶೀರ್ ಜಾಫರ್ ಸಾದಿಕ್ (23), ಇವರ 15 ವರ್ಷದ ಸಹೋದರ, ಸಾದಿಕ್ ತಂದೆ ಅಬ್ದುಲ್ ಕರೀಂ (50), ಸಂಬಂಧಿ ತಳಂಗರೆ ಸಿರಾಮಿಕ್ ರೆಡ್ಡಿ ಬಶೀರ್ ಅಹ್ಮದ್ ಶಹೀದ್ (17), ಕೊರಕೋಡು ಬಿಲಾಲ್ ನಗರ ಫತಾಹ್ ಕೆ (34) ಮತ್ತು ಸಿರಾಮಿಕ್ ರೋಡ್ ಮಹಸೂದ್ ಮಂಜಿಲ್‍ನ ಮುಹಮ್ಮದ್ ಮರ್ವಾನ್ ಮನಾಸಿರ್ (23) ಎಂಬಿವರನ್ನು ಇರಿದು ಗಾಯಗೊಳಿಸಲಾಗಿತ್ತು.
ಜಾಫರ್ ಸಾದಿಕ್ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕಾಸರಗೋಡು ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

