HEALTH TIPS

ಸಾವರ್ಕರ್ ವಿವಾದ: ಶಿಕ್ಷಕನ ಅಮಾನತು ಖಂಡಿಸಿ ಎನ್‍ಟಿಯು ವತಿಯಿಂದ ಡಿಡಿಇ ಕಚೇರಿ ಎದುರು ಧರಣಿ

ಕಾಸರಗೋಡು: ಇತಿಹಾಸವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ, ವಾಸ್ತವಾಂಶ ಅರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎನ್‍ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್ ತಿಳಿಸಿದ್ದಾರೆ. 


ಅವರು ಕುಂಬಳ ಉಪ-ಜಿಲ್ಲಾ ಮಟ್ಟದ'ಸ್ವಾತಂತ್ರ್ಯ ರಸಪ್ರಶ್ನೆ' ಕಾರ್ಯಕ್ರಮವೊಂದರಲ್ಲಿ 'ವೀರ ಸಾವರ್ಕರ್' ಬಗ್ಗೆ ಕೇಳಲಾದ ಪ್ರಶ್ನೆಗೆ ಸಂಬಂಧಿಸಿ ಶಿಕ್ಷಕರೊಬ್ಬರ ಅಮಾನತು ವಿರುದ್ಧ ಎನ್‍ಟಿಯು ವತಿಯಿಂದ ನಡೆದ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿ ಎದುರು ನಡೆಸಲಾದ ಧರಣಿ ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಣವು ಎಂದಿಗೂ ರಾಜಕೀಯ ಒತ್ತಡಕ್ಕೆ ಒಳಗಾಗಬಾರದು ಹಾಗೂ  ಇತಿಹಾಸವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು.ಕೇರಳದಲ್ಲಿರುವ ಪ್ರತಿಯೊಬ್ಬರೂ ವೀರ ಸಾವರ್ಕರ್ ಅವರ ರಾಜಕೀಯ ವಿಚಾರಗಳನ್ನು ಒಪ್ಪದಿರಬಹುದು ಮತ್ತು ಅವರ ನಿಲುವುಗಳನ್ನು ಟೀಕಿಸಲು ಯಾರಿಗಾದರೂ ಸ್ವಾತಂತ್ರ್ಯವಿರಬಹುದು. ಆದರೆ, ಭಾರತದ ಇತಿಹಾಸದಲ್ಲಿ ಅವರು ಪ್ರಮುಖ ವ್ಯಕ್ತಿಯಾಗಿರುವ ಕಾರಣದಿಂದಾಗಿ ಯಾರೂ ಅವರನ್ನು ಇತಿಹಾಸದಿಂದ ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ರಸಪ್ರಶ್ನೆ ಪ್ರಶ್ನೆಗೆ ಸಂಬಂಧಿಸಿದಂತೆ ಶಿಕ್ಷಕರ ವಿರುದ್ಧ ಕೈಗೊಂಡ ಕ್ರಮವನ್ನು ಮರುಪರಿಶೀಲಿಸಿ, ಅಮಾನತು ಹಿಂಪಡೆಯಬೇಕು, ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರನ್ನು ರಾಜಕೀಯ ಒತ್ತಡಗಳಿಂದ ರಕ್ಷಿಸಬೇಕು ಎಂದು ಪ್ರತಿಭಟನಾಕರರು ಒಪತ್ತಾಯಿಸಿದರು. 

ಎನ್‍ಟಿಯು ಕಾಸರಗೋಡು ಜಿಲ್ಲಾ ಅಧ್ಯಕ್ಷ ಟಿ. ಕೃಷ್ಣನ್  ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಕೆ. ಪ್ರಭಾಕರನ್ ನಾಯರ್, ಮಹಿಳಾ ವಿಭಾಗದ ರಾಜ್ಯ ಜಂಟಿ ಸಂಚಾಲಕಿ ಎ. ಸುಚಿತಾ, ರಂಜಿತ್, ಓ. ಸತೀಶ್ ಕುಮಾರ್, ಕೆ. ಅರವಿಂದಾಕ್ಷ ಭಂಡಾರಿ, ಪಿ. ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಅಜಿತ್ ಸ್ವಾಗತ ¨

 250ಕ್ಕೂ ಹೆಚ್ಚು ಮಂದಿ ಶಿಕ್ಷಕರು ಧರಣಿಯಲ್ಲಿ ಪಾಲ್ಗೊಮಡಿದ್ದರು.   ಮೆರವಣಿಗೆಯನ್ನು ಡಿಡಿಇ ಕಚೇರಿ ವಠಾರದಲ್ಲಿ ಪೊಲೀಸರು ತಡೆದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries