HEALTH TIPS

ಅಪರಾಧ ಕೃತ್ಯ: ಟ್ರಂಪ್ ಆಡಳಿತಾವಧಿಯಲ್ಲಿ 1.75 ಲಕ್ಷಕ್ಕೂ ಅಧಿಕ ವೀಸಾ ರದ್ದು

ವಾಷಿಂಗ್ಟನ್: ಅಮೆರಿಕದಲ್ಲಿ ಕಾನೂನು ಮೀರಿ ವರ್ತಿಸುವ ವಿದೇಶಿ ಪ್ರಜೆಗಳ ವಿರುದ್ಧ ಟ್ರಂಪ್ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ. ಅಜಾಗರೂಕ ಚಾಲನೆಯಿಂದ ಹಿಡಿದು ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಾಗೂ ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇಲೆ ಸುಮಾರು 1.75 ಲಕ್ಷಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ಹೇಳಿದೆ. 


ವೀಸಾ ಪಡೆದವರು ತಮ್ಮ ವೀಸಾ ನಿಯಮಗಳನ್ನು ಪಾಲಿಸುತ್ತಾರೆಯೇ ಮತ್ತು ಅಮೆರಿಕನ್ನರಿಗೆ ಅಪಾಯವನ್ನುಂಟುಮಾಡುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿರಂತರ ತನಿಖಾ ಪ್ರಕ್ರಿಯೆಯ ಪರಿಣಾಮವಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ವೀಸಾ ನಿಯಮಗಳ ಉಲ್ಲಂಘನೆ, ಅಪರಾಧ ಎಸಗಿದ, ಅಮೆರಿಕದ ಪ್ರಜೆಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ, ವಂಚನೆ ಪ್ರಕರಣಗಳಲ್ಲಿ ಭಾಗಿಯಾದ, ವಲಸೆ ನೀತಿ ದುರುಪಯೋಗಪಡಿಸಿಕೊಂಡ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ವಿದೇಶಿ ಪ್ರಜೆಗಳ 1,75,000 ಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ವೀಸಾ ರದ್ದತಿಯ ದೇಶವಾರು ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ವಿದೇಶಾಂಗ ಇಲಾಖೆ ಅಮೆರಿಕದ ವೀಸಾ ಎಂಬುದು ಒಂದು ವಿಶೇಷ ಸೌಲಭ್ಯವೇ ಹೊರತು, ಹಕ್ಕಲ್ಲ. ಅದನ್ನು ದುರುಪಯೋಗಪಡಿಸಿಕೊಳ್ಳುವವರಿಂದ ನಮ್ಮ ಸಮಾಜವನ್ನು ರಕ್ಷಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ

ಹಲ್ಲೆ, ದಾಂಧಲೆ, ಮದ್ಯಪಾನ ಮಾಡಿ ವಾಹನ ಚಾಲನೆ, ಕಳವು ಮತ್ತು ಮಾದಕದ್ರವ್ಯ ಸಾಗಾಟ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ಕಠಿಣ ಕ್ರಮ ಕೈಗೊಂಡ ಹಿನ್ನೆಲೆ ಹೆಚ್ಚಿನ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದೂ ಇಲಾಖೆ ಹೇಳಿದೆ.

ಅಲ್ಲದೇ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮಾನವ ಸಾಗಾಣಿಕೆಯಂತಹ ಗಂಭೀರ ಅಪರಾಧ ಎಸಗಿದವರ ವೀಸಾಗಳನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

ವೀಸಾ ರದ್ದುಗೊಂಡ ವ್ಯಕ್ತಿಗಳಲ್ಲಿ ಮಾನಸಿಕ ಅಸ್ವಸ್ಥ, ವಿಕಲಚೇತನ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ವಿದೇಶಿ ಪ್ರಜೆಯೂ ಸೇರಿದ್ದಾನೆ.

ಉತ್ತರ ಆಫ್ರಿಕಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು 'ಬರ್ತ್ ಟೂರಿಸ್ಟ್' ಪೋಷಕರ 100ಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಿದೆ. ಈ ಪೋಷಕರು ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ಸಿಗಲಿ ಎಂಬ ಉದ್ದೇಶದಿಂದಷ್ಟೇ ಅಲ್ಲಿಗೆ ಪ್ರವಾಸ ಬಂದಿದ್ದರು ಎಂದು ಇಲಾಖೆ ಹೇಳಿದೆ.

ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ನಿರ್ದೇಶನದಂತೆ ಕ್ಯೂಬಾ ಕಮ್ಯುನಿಸ್ಟ್ ಆಡಳಿತದೊಂದಿಗೆ ೆ ಸಂಪರ್ಕ ಹೊಂದಿದ್ದವರು, ಇರಾನ್ ಆಡಳಿತ ಬೆಂಬಲಿಗರು ಹಾಗೂ ದೇಶದ ಭದ್ರತೆಗೆ ಬೆದರಿಕೆಯಾಗಿದ್ದ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲು ನಿರ್ಧರಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries