HEALTH TIPS

2029ಕ್ಕೆ ರಾಹುಲ್ ಗಾಂಧಿ ಇಂಡಿಯಾ ಬಣದ ಪ್ರಧಾನಿ ಅಭ್ಯರ್ಥಿ: ತಮಿಳುನಾಡು ಸಚಿವ

ಚೆನ್ನೈ: 2029ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂಡಿಯಾ ಬಣದ ಪ್ರಧಾನಿ ಅಭ್ಯರ್ಥಿ ಎಂದು ತಮಿಳುನಾಡಿನ ಸಚಿವ ಪಿ ವಿಶ್ವಸಾಥನ್ ಹೇಳಿದ್ದಾರೆ.


ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಸಿ ವಿಜಯ್ ಅವರು ಪ್ರಧಾನಿ ಅಭ್ಯರ್ಥಿ ಎಂದು ಟಿವಿಕೆ ಸರ್ಕಾರದ ಕೆಲ ಸಚಿವರು, ಶಾಸಕರು ಮತ್ತು ಸಾರ್ವಜನಿಕರ ಗುಂಪುಗಳು ಬಿಂಬಿಸುತ್ತಿರುವ ನಡುವೆಯೇ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇಂಡಿಯಾ ಬಣದಿಂದ ಮುಂದಿನ ಪ್ರಧಾನಿ ಅಭ್ಯರ್ಥಿ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ರಾಹುಲ್ ಗಾಂಧಿ ಜೊತೆಗೆ ಅರವಿಂದ ಕೇಜ್ರಿವಾಲ್ ಹೆಸರೂ ಕೇಳಿಬರುತ್ತಿದೆ.

'ಈ ವಿಷಯದಲ್ಲಿ ನಾವು ಬಹಳ ಸ್ಪಷ್ಟವಾಗಿದ್ದೇವೆ. ನಮ್ಮ ಪ್ರೀತಿಯ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು 2029ರ ಲೋಕಸಭೆ ಚುನಾವವಣೆಗೆ ಇಂಡಿಯಾ ಬಣದ ಪ್ರಧಾನಿ ಅಭ್ಯರ್ಥಿ'ಎಂದು ವಿಶ್ವನಾಥನ್ ಹೇಳಿದ್ದಾರೆ.

ಇದೇ ವೇಳೆ, ನೇಪಾಳದಲ್ಲಿ ಸಿಲುಕಿರುವ ತಮಿಳುನಾಡಿನ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ನಾಲ್ವರು ಸದಸ್ಯರ ಸಚಿವರ ಸಮಿತಿಯನ್ನು ಕಳುಹಿಸಿರುವುದಾಗಿ ಹೇಳಿದ್ದಾರೆ. ಪ್ರವಾಹದಲ್ಲಿ ಮೃತರ ಸಂಖ್ಯೆ 469ಕ್ಕೆ ಏರಿದ್ದು, ಇನ್ನೂ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರು ಮತ್ತು ಅವರ ಕುಟುಂಬಗಳ ಅನುಕೂಲಕ್ಕಾಗಿ ತಮಿಳುನಾಡು ಸರ್ಕಾರವು 24 ಗಂಟೆ ಸಹಾಯವಾಣಿ ತೆರೆದಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries