HEALTH TIPS

₹22,000 ಕೋಟಿ ಸಾಲದಿಂದ ಮುಕ್ತಿ: ವಿದೇಶದಲ್ಲಿ ಹೂಡಿಕೆಗೆ ಸಜ್ಜಾದ ಸುಭಾಷ್ ಚಂದ್ರ

ನವದೆಹಲಿ: ಎಸ್ಸೆಲ್ ಸಮೂಹದ ಮುಖ್ಯಸ್ಥ ಹಾಗೂ ಝೀ ಎಂಟರ್‌ಟೈನ್‌ಮೆಂಟ್‌ನ ಸ್ಥಾಪಕ ಸುಭಾಷ್ ಚಂದ್ರ ಗೋಯೆಂಕ, ಭಾರಿ ಸಾಲದ ಸಂಕಷ್ಟವನ್ನು ಎದುರಿಸಿದ ಬಳಿಕವೂ ಹೊಸ ಉದ್ಯಮಗಳತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ. ಅಗತ್ಯವಿದ್ದರೆ ಕುಟುಂಬದವರಿಂದ ಸಾಲ ಪಡೆದು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ಯೋಜನೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.


ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, 'ಸ್ವಿಟ್ಜರ್‌ಲ್ಯಾಂಡ್‌ನ ಹೂಡಿಕೆ ಕ್ಷೇತ್ರದ ಸ್ನೇಹಿತರೊಂದಿಗೆ ಕೈಜೋಡಿಸಿ ಹೊಸ ಯೋಜನೆಗಳನ್ನು ಆರಂಭಿಸುವ ಉದ್ದೇಶವಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ಒಂದು ಅಥವಾ ಎರಡು ವಾರಗಳಲ್ಲಿ ಹಂಚಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

ಎಸ್ಸೆಲ್ ಸಮೂಹದ ಸಾಲಗಳಿಗೆ ವೈಯಕ್ತಿಕ ಖಾತರಿ ನೀಡಿದ್ದ ಇವರು, ಬರೋಬ್ಬರಿ ₹22,006 ಕೋಟಿ ಸಾಲವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದರ ವಿರುದ್ಧ ಬ್ಯಾಂಕ್‌ಗಳು ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ(ಎನ್‌ಸಿಎಲ್‌ಟಿ) ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ₹22 ಸಾವಿರ ಕೋಟಿ ಸಾಲಕ್ಕೆ ಕೇವಲ ₹6 ಕೋಟಿ ಮರುಪಾವತಿಸಲು ಒಪ್ಪಿಗೆ ನೀಡಿತ್ತು. ಇದು ಬ್ಯಾಂಕ್‌ಗಳು ₹100 ಸಾಲ ಕೊಟ್ಟು ಕೇವಲ 3 ಪೈಸೆ ವಸೂಲಿ ಮಾಡಿಕೊಂಡಂತಾಗುತ್ತದೆ.

ಈ ಪ್ರಕರಣ ದೇಶದಲ್ಲಿ ಕಾರ್ಪೋರೇಟ್ ದಿವಾಳಿತನ ಮತ್ತು ಸಾಲ ವಸೂಲಾತಿ ವ್ಯವಸ್ಥೆ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

'ಈಗ ತಮ್ಮ ಬಳಿ ಉಳಿದಿರುವ ಕೊನೆಯ ₹6.5 ಕೋಟಿ ಮೊತ್ತವನ್ನೂ ಸಾಲ ಮರುಪಾವತಿಗೆ ಬಳಸಲಾಗುವುದು' ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

'ನಾನು ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿಯಂತೆ ಮಾತನಾಡುತ್ತಿಲ್ಲ. ನನ್ನ ಬಳಿ ಒಂದು ಸಣ್ಣ ಮನೆ ಇದೆ. ಅದನ್ನು ಬಾಡಿಗೆಗೆ ನೀಡಿ ಬರುವ ಆದಾಯದಿಂದ ಜೀವನ ನಿರ್ವಹಿಸುತ್ತಿದ್ದೇನೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮತ್ತೆ ಸಂಪಾದಿಸುತ್ತೇನೆ. ಹೊಸ ಆಲೋಚನೆಗಳು ಮತ್ತು ಹೊಸ ಉದ್ಯಮಗಳನ್ನು ನಿರ್ಮಿಸುವುದು ನನಗೆ ಗೊತ್ತು' ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries