HEALTH TIPS

ಇರಾನ್ ಯುದ್ಧದಲ್ಲಿ ಅಮೆರಿಕದ ಶೇ. 25ರಷ್ಟು ಡ್ರೋನ್ ನಾಶ: ವರದಿ

ವಾಶಿಂಗ್ಟನ್: ಇರಾನ್ ನೊಂದಿಗಿನ ಯುದ್ಧದ ಸಮಯದಲ್ಲಿ ಅಮೆರಿಕವು ಕನಿಷ್ಠ 45 ಎಂಕ್ಯು-9 ರೀಪರ್ ಕಣ್ಗಾವಲು ಮತ್ತು ದಾಳಿ ನಡೆಸುವ ಡ್ರೋನ್ ಗಳನ್ನು ಕಳೆದುಕೊಂಡಿದೆ. ಇದು ಅಮೆರಿಕದ ಒಟ್ಟು ಡ್ರೋನ್ ಪಡೆಗಳ ಪೈಕಿ ಶೇಕಡಾ 25ರಷ್ಟಿದ್ದು, ತೆರಿಗೆದಾರರಿಗೆ 1.3 ಶತಕೋಟಿ ಡಾಲರ್ಗಿಂತಲೂ ಹೆಚ್ಚು ವೆಚ್ಚ ತರಬಹುದು ಎಂದು 'ದಿ ವಾಷಿಂಗ್ಟನ್ ಪೋಸ್ಟ್' ಗುರುವಾರ ವರದಿ ಮಾಡಿದೆ.

ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗ ಅಮೆರಿಕ ಬಳಿ ಸುಮಾರು 185 ರೀಪರ್ ಡ್ರೋನ್ಗಳಿದ್ದವು. ವಾಯುಪಡೆಯ ಬಳಿ 165 ಮತ್ತು ಮೆರೈನ್ ಕಾಪ್ಸ್ ಬಳಿ 20 ಡ್ರೋನ್ ಗಳಿದ್ದವು. ಎಂಕ್ಯು-9 ರೀಪರ್ ಕಣ್ಗಾವಲು ಮತ್ತು ನಿಖರವಾದ ದಾಳಿಗಳಿಗಾಗಿ ಬಳಸಲಾಗುವ ರಿಮೋಟ್ ಚಾಲಿತ ಡ್ರೋನ್ ಆಗಿದೆ. ಅವುಗಳಲ್ಲಿರುವ ಉಪಕರಣಗಳು ಮತ್ತು ಆಯುಧಗಳನ್ನು ಆಧರಿಸಿ ಒಂದು 'ರೀಪರ್' ಡ್ರೋನ್ ಬೆಲೆ ಸುಮಾರು 30 ದಶಲಕ್ಷದಿಂದ 50 ದಶಲಕ್ಷ ಡಾಲರ್ ಆಗಿರುತ್ತದೆ. ಮುಖ್ಯವಾಗಿ ಹಾರ್ಮುಝ್ ಜಲಸಂಧಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾಗ ಹಲವಾರು ರೀಪರ್ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಅಮೆರಿಕ ತನ್ನ ನಿಖರವಾದ, ಭೂಮಿಯಿಂದ ಭೂಮಿಗೆ ಹಾರುವ ಕ್ಷಿಪಣಿಗಳ ಸಂಗ್ರಹವನ್ನು ಸಹ ಖಾಲಿ ಮಾಡಿಕೊಂಡಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries