HEALTH TIPS

Iran ಮೇಲಿನ ನೌಕಾ ದಿಗ್ಬಂಧನ ಅನಿರ್ದಿಷ್ಟಾವಧಿ ವಿಸ್ತರಣೆ: ಅಮೆರಿಕ ಎಚ್ಚರಿಕೆ

ವಾಶಿಂಗ್ಟನ್: ಕದನ ವಿರಾಮ ಮಾತುಕತೆಗಳು ಸ್ಥಗಿತಗೊಂಡಿದ್ದು, ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ 'ಹಾರ್ಮುಝ್ ಜಲಸಂಧಿ'ಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಇರಾನ್ ಮೇಲಿನ ತನ್ನ ನೌಕಾಪಡೆಯ ದಿಗ್ಬಂಧನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸುವುದಾಗಿ ಅಮೆರಿಕ ಎಚ್ಚರಿಸಿದೆ.


ಈ ಪ್ರದೇಶದಲ್ಲಿ ಯುದ್ಧನೌಕೆಗಳನ್ನು ಹಂತ-ಹಂತವಾಗಿ ಬದಲಾಯಿಸುವ ಮೂಲಕ ಅಮೆರಿಕನ್ ನೌಕಾಪಡೆಯು ಅನಿರ್ದಿಷ್ಟಾವಧಿಯವರೆಗೆ ಇಂತಹ ದಿಗ್ಬಂಧನವನ್ನು ಕಾಯ್ದುಕೊಳ್ಳಬಲ್ಲದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.

ಈ ಮಧ್ಯೆ, ಇರಾನ್ಗೆ ಮತ್ತಷ್ಟು ಆರ್ಥಿಕ ನಷ್ಟವನ್ನು ಉಂಟುಮಾಡಲು ಅಮೆರಿಕ ಯೋಜನೆ ರೂಪಿಸಿದೆ. ಇರಾನ್ ಮೇಲೆ ಈ ಹಿಂದೆಂದೂ ಕಾಣದಂತಹ ಕ್ರಮಗಳನ್ನು ಅಮೆರಿಕ ಕೈಗೊಳ್ಳಲಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.

'ಮುಂದಿನ ವಾರ ದೇಶವೊಂದರ ಆರ್ಥಿಕ ಪ್ರತ್ಯೇಕತೆಯ ಇತಿಹಾಸದಲ್ಲೇ ಇದುವರೆಗೆ ಯಾರೂ ನೋಡಿರದಂತಹ ಕ್ರಮಗಳನ್ನು ನಾವು ಜಾರಿಗೆ ತರಲಿದ್ದೇವೆ. ಇದು ಜಗತ್ತು ಈ ಹಿಂದೆಂದೂ ಕಾಣದ ಆರ್ಥಿಕ ಪ್ರತ್ಯೇಕತೆ ಮತ್ತು ಹಾರ್ಮುಝ್ ಜಲಸಂಧಿಯಲ್ಲಿ ಮುಂದುವರಿಯುವ ಕರಾವಳಿ ದಿಗ್ಬಂಧನದ ಸಂಯೋಜನೆಯಾಗಿರಲಿದೆ. ಇದು ಇರಾನ್ ಬಂದರುಗಳಿಂದ ಯಾವುದೇ ಸರಕು ಒಳಗೆ ಬರದಂತೆ ಅಥವಾ ಹೊರಗೆ ಹೋಗದಂತೆ ತಡೆಯುತ್ತದೆ' ಎಂದು ಬೆಸೆಂಟ್ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries