HEALTH TIPS

ಸ್ಮೋಕ್ ಹೌಸ್‍ನಲ್ಲಿರಿಸಿದ್ದ ರಬ್ಬರ್ ಶೀಟ್ ಕಳವು: 2 ತಿಂಗಳೊಳಗೆ ಎರಡನೇ ಬಾರಿ ಕಳ್ಳರ ದಾಳಿ

ಮುಳ್ಳೇರಿಯ: ಸ್ಮೋಕ್ ಹೌಸ್‍ದಲ್ಲಿರಿಸಿದ್ದ ರಬ್ಬರ್ ಶೀಟ್ ಗಳನ್ನು ಕಳವು ನಡೆಸಲಾಗಿದೆ. ಕಿನ್ನಿಂ ಗಾರು ಬಳಿಯ ಕೊಚ್ಚಿ ಎಂಬಲ್ಲಿನ ಮೋಹನಕೃಷ್ಣ ಭಟ್ ಎಂಬವರ ರಬ್ಬರ್ ಶೀಟ್ ಕಳವಿಗೀಡಾಗಿದೆ.   ಮನೆಯ ಅಲ್ಪ ದೂರದಲ್ಲೇ ಸ್ಮೋಕ್ ಹೌಸ್ ಇದ್ದು ಇಂದು ಬೆಳಿಗ್ಗೆ ಮೋಹನಕೃಷ್ಣ   ಭಟ್ ಅಲ್ಲಿಗೆ ಹೋದಾಗಲೇ ರಬ್ಬರ್ ಶೀಟ್ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಸ್ಮೋಕ್ ಹೌಸ್‍ನ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿದೆ. ಅಲ್ಲದೆ ದಾರಿಯಲ್ಲಿ  10ರಷ್ಟು ಶೀಟ್‍ಗಳು ಬಿದ್ದುಕೊಂಡಿರುವುದು ಕಂಡುಬಂದಿದೆ. ಕಳ್ಳರು ರಬ್ಬರ್ ಶೀಟ್ ಕದ್ದೊಯ್ಯುತ್ತಿದ್ದ ವೇಳೆ ಇವು ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಕಳವು ಬಗ್ಗೆ ಮೋಹನಕೃಷ್ಣ ಭಟ್ ಆದೂರು ಪೆÇಲೀಸರಿಗೆ ದೂರು ನೀಡಿದ್ದಾರೆ. ಪೆÇಲೀಸರು ತಲುಪಿ ಪರಿಶೀಲಿಸಿದ ಬಳಿಕವೇ ಎಷ್ಟು ರಬ್ಬರ್ ಕಳವು ನಡೆದಿದೆಯೆಂದು ತಿಳಿದುಬರಲಿದೆ.

ಇದೇ ಸ್ಮೋಕ್ ಹೌಸ್‍ನಿಂದ ಕಳೆದ ಜೂನ್ 30ರಂದು ರಬ್ಬರ್ ಶೀಟ್‍ಗಳನ್ನು ಕಳವು ನಡೆಸಲಾಗಿತ್ತು. ಅಂದು ಸುಮಾರು 100 ಕಿಲೋ  ರಬ್ಬರ್ ಶೀಟ್ ಕಳವು ನಡೆದಿದ್ದು,  ಈ ಬಗ್ಗೆ ಆದೂರು ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಪ್ರಕರಣ ದಲ್ಲಿ ಇಬ್ಬರು ಆರೋಪಿಗಳನ್ನು ಅನಂ ತರ ಸೆರೆಹಿಡಿಯಲಾಗಿದ್ದು,  ಕಳವಿಗೀ ಡಾದ ರಬ್ಬರ್‍ನ ಪೈಕಿ 25 ಕಿಲೋ ರಬ್ಬರ್ ಪೆರ್ಲದಿಂದ ವಶಪಡಿಸಲಾ ಗಿತ್ತು. ಇದೀಗ ಮತ್ತೆ ಇದೇ ಸ್ಮೋಕ್ ಹೌಸ್‍ನಿಂದ ಕಳವು ನಡೆಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries