ಕಠ್ಮಂಡು : ನೇಪಾಳದ ಲುಂಬಿನಿ ಪ್ರಾಂತ್ಯದಲ್ಲಿರುವ ರೋಲ್ಪಾ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಜಿಲ್ಲೆಯ ಇರಿವಾಂಗ್‌ನಲ್ಲಿರುವ ಗ್ರಾಮೀಣ ಪುರಸಭೆಯ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ನಸುಕಿನ ಮುಂಜಾನೆ 3.07ಕ್ಕೆ ಘಟನೆ ನಡೆದಿದೆ.
ಸುತ್ತಲಿನ ಪ್ರದೇಶಗಳಲ್ಲಿಯೂ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಅಧ್ಯಯನ ಕೇಂದ್ರ ತಿಳಿಸಿದೆ.
ಭೂಕಂಪದಿಂದ ಉಂಟಾದ ಯಾವುದೇ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

