HEALTH TIPS

ನಕಲಿ ಚಿನ್ನ ಅಡವಿರಿಸಿ 5.75 ಲಕ್ಷ ರೂ. ಸಾಲ ಪಡೆದು ವಂಚನೆ-ಇಬ್ಬರಿಗೆ ಕೇಸು

ಕಾಸರಗೋಡು: ಕಳನಾಡಿನಲ್ಲಿರುವ ಚೆಮ್ಮಾಡ್ ಪಂಚಾಯತ್ ವನಿತಾ ಸರ್ವೀಸ್ ಸೊಸೈಟಿಯಲ್ಲಿ  ನಕಲಿ ಚಿನ್ನ ಅಡವಿರಿಸಿ 5.75 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ   ಇಬ್ಬರ ವಿರುದ್ಧ ಮೇಲ್ಪಂಬ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಚಂದ್ರಗಿರಿ ಕೀಯೂರು ಹೌಸ್‍ನ ತಾಜುದ್ದೀನ್ (47) ಮತ್ತು ಚಾತಂಗೈ ಮಣಿಯರದ ಕೆ. ಸಂತೋಷ (39) ಎಂಬವರಿಗೆ ಈ ಕೇಸು. ಈ ಬಗ್ಗೆ ಚೆಮ್ನಾಡ್ ಪಂಚಾಯಿತಿ ಕಳನಾಡು ವನಿತಾ ಸರ್ವೀಸ್ ಸೊಸೈಟಿ ಕಾರ್ಯದರ್ಶಿ ಎ. ಉಷಾ ಕುಮಾರಿ ನೀಡಿದ ದೂರಿನನ್ವಯ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ತಾಜುದ್ದೀನ್, 2025ರ ಮಾರ್ಚ್ 23, 26, ಏಪ್ರಿಲ್ 16 ಮತ್ತು ಜೂನ್ 2 ಎಂಬೀ ದಿನಗಳಲ್ಲಾಗಿ ಒಟ್ಟು 48.21 ಗ್ರಾಂ ನಕಲಿ ಚಿನ್ನ ಅಡವಿರಿಸಿ 4,40,000 ರೂ. ಸಾಲ ಪಡೆದು ವಂಚಿಸಿದ್ದಾನೆ. ಇದೇ ರೀತಿ ಇನ್ನೋರ್ವ ಆರೋಪಿ ಸಂತೋಷ್ ಮೇ 4ರಂದು 15.6 ಗ್ರಾಂ ನಕಲಿ ಚಿನ್ನ ಅಡವಿರಿಸಿ 1.35 ಲಕ್ಷ ರೂ. ಸಾಲ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಮೇಲ್ಪರಂಬ ಠಾಣೆ ಎಸ್.ಐ ಟಿ.ಅಖಿಲ್ ಈ ಬಗ್ಗೆ  ತನಿಖೆ ಆರಂಭಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries