ಬದಿಯಡ್ಕ: ಮಾರ್ಪನಡ್ಕ ಗುಳಿಗ ದೈವದ ಕಾಣಿಕೆ ಹುಂಡಿ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬದಿಯಡ್ಕ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಚೆರ್ಕಳದ ಬಾಡಿಗೆ ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿರುವ ಫಾರೂಕ್ ಅಲಿಯಾಸ್ 'ಸಿಂಗಲ್ ಫಾರೂಕ್' (46) ಬಂಧಿತ. ಬದಿಯಡ್ಕ ಠಾಣೆ ಇನ್‍ಸ್ಪೆಕ್ಟರ್ ಕೆ.ಆರ್. ಅನೂಪ್ ಕೃಷ್ಣ ಅವರ ನಿರ್ದೇಶನದಂತೆ ಎಸ್.ಐ ಅಭಿಜಿತ್ ನೇತೃತ್ವದ ಪೆÇಲೀಸರ ತಂಡ ಕಾಞಂಗಾಡಿನಿಂದ ಆರೋಪಿಯನ್ನು ಬಂಧಿಸಿದೆ.
ಜುಲೈ 29ರಂದು ನಸುಕಿಗೆ ಮಾರ್ಪನಡ್ಕ ಶ್ರೀಕೃಷ್ಣ ಭಜನಾ ಮಂದಿರದ ಹಿಂಭಾಗದಲ್ಲಿದ್ದ ಗುಳಿಗ ದೈವದ ಕಾಣಿಕೆ ಹುಂಡಿಯನ್ನು ಕಳವು ಮಾಡಲಾಗಿತ್ತು. ಹುಂಡಿಯಲ್ಲಿ ಸುಮಾರು 2ಸಾವಿರ ರೂ. ನಗದು ಇತ್ತು ಎಂದು ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಘಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆಡೂರು ಪಯಂಗಡಿ ಹೌಸ್ ನಿವಾಸಿ ಸಜಿತ್‍ನನ್ನು ಈ ಹಿಂದೆ ಬಂಧಿಸಲಾಗಿತ್ತು. ಬಂಧಿತ ಫಾರೂಕ್ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.

