HEALTH TIPS

6 ಲಕ್ಷ ಕೋಟಿ ರೂ. ದಾಟಿದ ಎಸ್‍ಬಿಐ ಪಿಂಚಣಿ ನಿಧಿಗಳ ನಿರ್ವಹಣೆ: 1.85 ಕೋಟಿಗೂ ಹೆಚ್ಚು ಚಂದಾದಾರರಿಗೆ ಸೇವೆ

ಕೊಚ್ಚಿ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿಯಲ್ಲಿ ಪ್ರಮುಖ ಪಿಂಚಣಿ ನಿಧಿ ವ್ಯವಸ್ಥಾಪಕರಾಗಿರುವ ಎಸ್‍ಬಿಐ ಪಿಂಚಣಿ ನಿಧಿಗಳು 6 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಸರ್ಕಾರಿ, ಕಾರ್ಪೋರೇಟ್ ಮತ್ತು ಚಿಲ್ಲರೆ ವಿಭಾಗಗಳಲ್ಲಿ 1.85 ಕೋಟಿಗೂ ಹೆಚ್ಚು ಚಂದಾದಾರರಿಗೆ ಸೇವೆ ಸಲ್ಲಿಸುತ್ತಿರುವ ಕಂಪನಿಯು ಭಾರತದ ಪಿಂಚಣಿ ನಿಧಿ ವಲಯದಲ್ಲಿ ಶೇಕಡಾ 34 ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡಿದೆ. 


2018 ರಲ್ಲಿ 1 ಲಕ್ಷ ಕೋಟಿ ರೂ.ಗಳನ್ನು ದಾಟಿದ್ದ ಕಂಪನಿಯು ಈಗ 6 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ. ಕಳೆದ 15 ವರ್ಷಗಳಲ್ಲಿ ಎಸ್‍ಬಿಐ ಪಿಂಚಣಿ ನಿಧಿಗಳ ಆಸ್ತಿಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು ಶೇಕಡಾ 35.9 ರಷ್ಟಿದೆ. ಈ ಸಾಧನೆಯು ಚಂದಾದಾರರ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಎಸ್‍ಬಿಐ ಪಿಂಚಣಿ ನಿಧಿಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರಣಯ್ ರಂಜನ್ ದ್ವಿವೇದಿ ಹೇಳಿದರು.

ದೀರ್ಘಾವಧಿಯ ಹೂಡಿಕೆ ತಂತ್ರ ಮತ್ತು ಉತ್ತಮ ಆಡಳಿತ ಪದ್ಧತಿಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಭಾರತೀಯರಿಗೆ ಆರ್ಥಿಕವಾಗಿ ಸುರಕ್ಷಿತ ನಿವೃತ್ತಿಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಬದ್ಧವಾಗಿದೆ ಎಂದು ಅವರು ಹೇಳಿದರು.

2007 ರಲ್ಲಿ ಸ್ಥಾಪನೆಯಾದ SಃI ಪಿಂಚಣಿ ನಿಧಿಗಳು ಓPS ಅಡಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮೊದಲ ಪಿಂಚಣಿ ನಿಧಿ ವ್ಯವಸ್ಥಾಪಕರಲ್ಲಿ ಒಂದಾಗಿದೆ.

ಕಂಪನಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾಪೆರ್Çರೇಟ್‍ಗಳು ಮತ್ತು ಖಾಸಗಿ ವಲಯದ ಓPS ಖಾತೆಗಳು ಮತ್ತು ಅಟಲ್ ಪಿಂಚಣಿ ಯೋಜನೆ ಖಾತೆಗಳಿಗೆ ಪಿಂಚಣಿ ನಿಧಿಗಳನ್ನು ನಿರ್ವಹಿಸುತ್ತದೆ. ಕಂಪನಿಯು ಜೂನ್ 30, 2026 ರ ಹೊತ್ತಿಗೆ 6.04 ಲಕ್ಷ ಕೋಟಿ ರೂ.ಗಳ ನಿರ್ವಹಣೆಯಡಿಯಲ್ಲಿ ಆಸ್ತಿಯನ್ನು ಹೊಂದಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries