ತಿರುವನಂತಪುರಂ: ಮಧ್ಯವರ್ತಿಗಳನ್ನು ತೊಡೆದುಹಾಕಲು ಮೋಟಾರು ವಾಹನ ಇಲಾಖೆ ಕ್ರಮ ಕೈಗೊಂಡಿದೆ. ಇನ್ನು 60 ವಾಹನ ಸಂಬಂಧಿತ ಸೇವೆಗಳಿಗೆ ಆಧಾರ್ ಒಟಿಪಿ ಕಡ್ಡಾಯಗೊಳಿಸಲಾಗಿದೆ. ಇದು ಸೆಪ್ಟೆಂಬರ್ 21 ರಿಂದ ಜಾರಿಗೆ ಬರಲಿದೆ.
ಮಲಪ್ಪುರಂನ ಆಟೋ ಚಾಲಕ ಶೌಕತ್ ಎಂವಿಡಿಯಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮಧ್ಯವರ್ತಿಗಳು ಅರ್ಜಿದಾರರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಮೋಟಾರು ವಾಹನ ಇಲಾಖೆ ನಿರ್ಣಯಿಸಿದೆ.ವಾಹನ ಫಿಟ್‍ನೆಸ್ ಪರೀಕ್ಷೆಗೆ ಅರ್ಜಿದಾರರು ವಾಹನ್ ಪೆÇೀರ್ಟಲ್‍ನಲ್ಲಿ ಸ್ಲಾಟ್‍ಗಳನ್ನು ಕಾಯ್ದಿರಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಾಧ್ಯವಾದಷ್ಟು ಬೇಗ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು (ಎಟಿಎಸ್) ಸ್ಥಾಪಿಸಲಾಗುವುದು. ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಮೂರು ಎಟಿಎಸ್ ಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ.
ಮಲಪ್ಪುರಂನ ಕಿಝಿಸ್ಸೇರಿಯಲ್ಲಿ ಆಟೋ ಚಾಲಕ ಶೌಕತ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೋಟಾರು ವಾಹನ ಇಲಾಖೆ ಅಧಿಕಾರಿಗಳ ಲಂಚ ಮತ್ತು ಮಾನಸಿಕ ಕಿರುಕುಳದಿಂದಾಗಿ ತಾನು ಜೀವನ ಅಂತ್ಯಗೊಳಿಸುತ್ತಿದ್ದೇನೆ ಎಂದು ಬರೆದಿದ್ದರು. ಇದರ ನಂತರ, ಮೋಟಾರು ವಾಹನ ಇಲಾಖೆಯ ಸೇವೆಗಳಲ್ಲಿ ಏಜೆಂಟರ ಹಸ್ತಕ್ಷೇಪದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಯಿತು. ಶೌಕತ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವ ಸಿಪಿ ಜಾನ್ ಸಾರಿಗೆ ಇಲಾಖೆ ಕಾರ್ಯದರ್ಶಿ ಟಿ.ವಿ. ಅನುಪಮಾ ಅವರಿಗೆ ನಿರ್ದೇಶನ ನೀಡಿದ್ದರು.

