ನಿಕೋಸಿಯಾ: ಉತ್ತರ ಸೈಪ್ರಸ್ ಕರಾವಳಿಯಲ್ಲಿ ರವಿವಾರ 267 ಜನರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕರ ನೌಕೆಯೊಂದು ಮಗುಚಿದ್ದು, ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು 23 ಜನರು ನಾಪತ್ತೆಯಾಗಿದ್ದಾರೆ.
ನೌಕೆಯು ಉತ್ತರ ಸೈಪ್ರಸ್ ಬಂದರಿನಿಂದ ಹೊರಟ ಸ್ವಲ್ಪ ಸಮಯದಲ್ಲೇ ಮಗುಚಿದ್ದು, 237 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

