HEALTH TIPS

80ನೇ ಸ್ವಾತಂತ್ರ್ಯದಿನಾಚರಣೆ | 1,057 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳ ಗೌರವ

ನವದೆಹಲಿ: 80ನೇ ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ಹಾಗೂ ಕಾರಾಗೃಹ ಸೇವೆಗಳ ಒಟ್ಟು 1,057 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.


ಈ ಪ್ರಶಸ್ತಿಗಳಲ್ಲಿ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ, ಅಪರಾಧ ತಡೆಯುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ಅಸಾಧಾರಣ ಧೈರ್ಯ ತೋರಿದ ಸಿಬ್ಬಂದಿಗೆ 301 ಶೌರ್ಯ ಪದಕಗಳನ್ನು ನೀಡಲಾಗಿದ್ದು, 272 ಪೊಲೀಸ್ ಸಿಬ್ಬಂದಿಗೆ ಮತ್ತು 29 ಅಗ್ನಿಶಾಮಕ ಸಿಬ್ಬಂದಿಗೆ ಲಭಿಸಿವೆ.

ಶೌರ್ಯ ಪದಕಗಳಲ್ಲಿ ಹೆಚ್ಚಿನವು (197) ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಸಿಕ್ಕಿವೆ.

ಜಮ್ಮು-ಕಾಶ್ಮೀರದ 51, ಈಶಾನ್ಯ ರಾಜ್ಯಗಳ 12 ಮತ್ತು ಇತರ ಪ್ರದೇಶಗಳ 41 ಸಿಬ್ಬಂದಿಯೂ ಶೌರ್ಯ ಪದಕಗಳಿಗೆ ಭಾಜನರಾಗಿದ್ದಾರೆ.

►ವಿಶಿಷ್ಟ ಸೇವೆಗಾಗಿ 92 ರಾಷ್ಟ್ರಪತಿ ಪದಕಗಳು

ಕೇಂದ್ರ ಸರಕಾರವು ವಿಶಿಷ್ಟ ಸೇವೆಗಾಗಿ 92 ರಾಷ್ಟ್ರಪತಿ ಪದಕಗಳನ್ನೂ ನೀಡಿದೆ. ಇವುಗಳಲ್ಲಿ 83 ಪೊಲೀಸ್ ಸೇವಾ ಸಿಬ್ಬಂದಿಗೆ (ಸಿಬಿಐ ಸಿಬ್ಬಂದಿಗೆ ಆರು ಸೇರಿದಂತೆ), ನಾಲ್ಕು ಅಗ್ನಿಶಾಮಕ ಸೇವಾ ಸಿಬ್ಬಂದಿಗೆ, ಮೂರು ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ಹಾಗೂ ಎರಡು ಕಾರಾಗೃಹ ಸೇವಾ ಸಿಬ್ಬಂದಿಗೆ ಲಭಿಸಿವೆ. ಸೇವೆಯಲ್ಲಿನ ವಿಶೇಷ ವಿಶಿಷ್ಟ ದಾಖಲೆಗಾಗಿ ಈ ರಾಷ್ಟ್ರಪತಿ ಪದಕವನ್ನು ನೀಡಲಾಗುತ್ತದೆ.

ಇದರ ಜೊತೆಗೆ, ಈ ಸ್ವಾತಂತ್ರ್ಯದಿನಾಚರಣೆಯಂದು 664 ಪ್ರಶಂಸನೀಯ ಸೇವಾ ಪದಕಗಳನ್ನು ನೀಡಲಾಗಿದೆ. ಇವುಗಳಲ್ಲಿ 606 ಪೊಲೀಸ್ ಸೇವಾ ಸಿಬ್ಬಂದಿಗೆ (ಸಿಬಿಐ ಸಿಬ್ಬಂದಿಗೆ 15 ಸೇರಿದಂತೆ), 28 ಅಗ್ನಿಶಾಮಕ ಸೇವಾ ಸಿಬ್ಬಂದಿಗೆ, 18 ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ಹಾಗೂ 12 ಕಾರಾಗೃಹ ಸೇವಾ ಸಿಬ್ಬಂದಿಗೆ ದೊರೆತಿವೆ.

►ಸಿಬಿಐ ಸಿಬ್ಬಂದಿಗೆ 21 ಪ್ರಶಸ್ತಿಗಳು

ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಆರು ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಮತ್ತು 15 ಸಿಬ್ಬಂದಿಗೆ ಪ್ರಶಂಸನೀಯ ಸೇವಾ ಪದಕಗಳನ್ನು ನೀಡಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries