HEALTH TIPS

ಬೆಲ್ಜಿಯಂ | ಚರಂಡಿ ಕಾಮಗಾರಿ ವೇಳೆ 99 ಕೋಟಿ ರೂ. ಮೌಲ್ಯದ ನಿಧಿ ಪತ್ತೆ

ಬ್ರಸೆಲ್ಸ್: ಬೆಲ್ಜಿಯಂನ ನಿರ್ಮಾಣ ಹಂತದ ಸ್ಥಳವೊಂದರಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ಚರಂಡಿ ವ್ಯವಸ್ಥೆಗಾಗಿ ಗುಂಡಿ ತೋಡುವಾಗ ಸುಮಾರು 99 ಕೋಟಿ ರೂ. ಮೌಲ್ಯದ ಚಿನ್ನದ ನಿಧಿಯನ್ನು ಪತ್ತೆ ಮಾಡಿದ್ದಾನೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ. 


ಬ್ರಸೆಲ್ಸ್ ಸಮೀಪದ ವಾನ್ ಲಾಂಗನ್‍ಹೋವೆಸ್ಟ್ರಾಟ್‍ನಲ್ಲಿರುವ ಹಳೆಯ ಮದ್ಯದ ಕಾರ್ಖಾನೆ ಸ್ಥಳದಲ್ಲಿ ಕೋಬೆ ಎಂಬ ವಿದ್ಯಾರ್ಥಿ ತನ್ನ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದಾಗ ಈ ನಿಧಿ ಪತ್ತೆಯಾಗಿದ್ದು ಆತ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ನಿಧಿಯಲ್ಲಿ ಚಿನ್ನದ ನಾಣ್ಯಗಳು, ಚಿನ್ನದ ತುಣುಕುಗಳು ಮತ್ತು ಸಂಖ್ಯೆಗಳನ್ನು ಹೊಂದಿರುವ ಬಂಗಾರದ ಗಟ್ಟಿಗಳು ಸೇರಿವೆ. ಈ ವಸ್ತುಗಳನ್ನು ಚೀಲವೊಂದರಲ್ಲಿ ಇಟ್ಟು, 19ನೇ ಶತಮಾನದ ಅಂತ್ಯದಲ್ಲಿ ಮದ್ಯದ ಕಾರ್ಖಾನೆಯ ಮಾಲೀಕರಾಗಿದ್ದ ಥಿಯೋಫಿಲಸ್ ವಾನ್ ಅಸ್ಶೆ ಅವರಿಗಾಗಿ ನಿರ್ಮಿಸಲಾಗಿದ್ದ ವಿಶಾಲವಾದ ಬಂಗಲೆಯ ತಳ ಅಂತಸ್ತಿನ ಸುಟ್ಟ ಇಟ್ಟಿಗೆಯ ಗೋಡೆಯೊಳಗೆ ಬಚ್ಚಿಡಲಾಗಿತ್ತು. ಅಧಿಕಾರಿಗಳು ಈ ನಿಧಿಯ ಒಡೆತನದ ಕುರಿತು ತನಿಖೆ ನಡೆಸುತ್ತಿದ್ದು, ಚಿನ್ನವನ್ನು ಬ್ರಸೆಲ್ಸ್‍ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. `ಒಂದೆರಡು ನಾಣ್ಯಗಳಾಗಿದ್ದರೆ ಬಹುಶಃ ನೀಡುತ್ತಿರಲಿಲ್ಲವೇನೋ. ಮುಂದಿನ ದಿನಗಳಲ್ಲಿ ನಮಗೆ ಏನಾದರೂ ಪುರಸ್ಕಾರ ಸಿಗಬಹುದು ಎಂಬ ನಿರೀಕ್ಷೆಯಿದೆ' ಎಂದು ಕೋಬೆ ಹೇಳಿದ್ದಾನೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries