ಕಾಸರಗೋಡು: ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಬಹುಭಾಷಾ ಕವಿಸಂಗಮ ವೇದಿಕೆಯಲ್ಲಿ ಯುವ ಕವಯಿತ್ರಿ ಶರಣ್ಯಾ ನಾರಾಯಣನ್ ಅವರ ಚೊಚ್ಚಲ ಮಲೆಯಾಳ ಕವನ ಸಂಕಲನ 'ಪೆಣ್ ಪಗರ್ಪ್ 'ಬಿಡುಗಡೆಗೊಂಡಿತು.
ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕೆ ವಿ ಕುಮಾರನ್ ಸಮಾರಂಭ ಉದ್ಘಾಟಿಸಿದರು. ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಿದ್ಧ ಕವಿ ದಿವಾಕರನ್ ವಿಷ್ಣುಮಂಗಲ ಕೃತಿ ಅನಾವರಣಗೊಳಿಸಿದರು. ಪತ್ರಕರ್ತ ಟಿ ಎ ಶಾಫಿ ಮೊದಲ ಪ್ರತಿ ಸ್ವೀಕರಿಸಿದರು. ಬಹುಭಾಷಾಕವಿ ಸಂಗಮದಲ್ಲಿ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕನ್ನಡ , ಮಲಯಾಳ, ತುಳು, ಕರಾಡ, ಹವ್ಯಕ, ಹಿಂದಿ, ಇಂಗ್ಳೀಷ್, ಸಂಸ್ಕ್ರತ , ಮರಾಟಿ , ಕೊಂಕಣಿ ಭಾಷೆಗಳಲ್ಲಿ ಕವಿತಾ ವಾಚನ ನಡೆಯಿತು. ಪ್ರೇಮಚಂದ್ರನ್ ಚೋಂಬಾಲ, ಬಶೀರ್ ಅಹಮ್ಮದ್ ಮೊಗ್ರಾಲ್, ಎಮ್ ಪಿ ಜಿಲ್ ಜಿಲ್, ಬಾಲಕೃಷ್ಣ ಚೆರ್ಕಳ , ಶೆರೀಫ್ ಕೊಡವಂಜಿ , ನರಸಿಂಹ ಭಟ್ ಏತಡ್ಕ, ಜ್ಯೊತ್ಸ್ನಾ ಕಡಂದೆಲು, ವನಜಾಕ್ಷಿ ಚೆಂಬ್ರಕಾನ, ಶ್ರೀನಿವಾಸ ನಾಯ್ಕ್ ಸ್ವರ್ಗ, ಶುಭ ನೆಯ್ಯಂಗಾನ, ಲೇಖ ಕೆ ಪಿ, ಸುನೀತ ಕರಿಚೆರಿ, ಸುಮಿತ್ರ ಎರ್ಪಕಟ್ಟೆ , ತೇಜಸ್ವಿನಿ, ವಿಜಯ ಕಾನ, ರಹಮಾನ್ ಮುಟ್ಟತ್ತೊಡಿ, ಆವನಿ ಕರಿಂಬಿಲ, ಶಶಿಕಲ ಕುಂಬ್ಳೆ, ಸುಲೈಕಾ ಮಾಹಿನ್, ಸುಮನ ಕರಿಂಬಿಲ, ಕೆ ಎಂ ಸುಕುಮಾರನ್, ರವೀಂದ್ರನ್ ಪಾಡಿ ಮೊದಲಾದವರು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.
ಕವಿ ರವೀಂದ್ರನ್ ಪಾಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಯಿತ್ರಿ ಶರಣ್ಯ ನಾರಾಯಣನ್ ಕಾರ್ಯಕ್ರಮ ನಿರೂಪಸಿ ವಂದಿಸಿದರು.



