ಕಾಸರಗೋಡು: 'ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ'ಎಂಬ ಶೀರ್ಷಿಕೆಯ ಸರಣಿ ಕಾರ್ಯಕ್ರಮದನ್ವಯ ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ, ವಿಶೇಷ 'ಚಿಂತನ- ಮಂಥನ'ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಜರುಗಿತು.
ಸುರತ್ಕಲ್ ಇಡ್ಯಾ ದೇವಸ್ಥಾನದ ಶಕುಂತಳಾ ರಮಾನಂದ ಭಟ್ ಸಮಾರಂಭ ಉದ್ಘಾಟಿಸಿ ಮಾಥನಾಡಿ, ಯಕ್ಷಗಾನ ಮಹಿಳಾ ಕಲಾವಿದರಿಗೆ ಪೆÇ್ರೀತ್ಸಾಹ ಅಗತ್ಯವಿದ್ದು, ಸಿರಿಬಾಗಿಲು ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿರುವ ಇಂತಹ ಗೋಷ್ಠಿಯಿಂದ ಮತ್ತಷ್ಟು ತೊಡಗಿಸಿಕ್ಕೊಳ್ಳುವಂತಾಗಲು ಸ್ಪೂರ್ತಿ ದೊರಕಿದಂತಾಗಿದೆ ಎಂದು ತಿಳಿಸಿದರು.
ಕಾಸರಗೋಡಿನ ಹಿರಿಯ ಕಲಾವಿದೆ ವಿಶ್ರಾಂತ ಪ್ರಾಧ್ಯಾಪಕಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಇಂದು ಮಹಿಳೆಯರು ಸಮಾಜಮುಖಿಯಾದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕ್ಕೊಳ್ಳುವುದರ ಮೂಲಕ ತಾವು ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದಾಯಕ ವಿಚಾರ. ಇಂತಹ ವಿಚಾರ ಸಂಕಿರಣಗಳು ಮಹಿಳಾ ಕಲಾವಿದೆಯರ ಆತ್ಮಸ್ಥೈರ್ಯ ಹೆಚ್ಚಲು ಕಾರಣವಾಗಲಿರುವುದಾಗಿ ತಿಳಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯೆ ನಿರ್ಮಲ ಹೆಗಡೆ ಶಿರಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಯಲಕ್ಷ್ಮಿ ಆರ್. ಹೊಳ್ಳ ಕಯ್ಯಾರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಗಿದ್ದ ವಿಶೇಷ ಚಿಂತನ ಮಂಥನದಲ್ಲಿ ಮಹಿಳೆಯರು ಮತ್ತು ಯಕ್ಷಗಾನದ ಭವಿಷ್ಯ, ಯಕ್ಷಗಾನದಲ್ಲಿ ಮಹಿಳೆಯರು-ಅವಕಾಶ, ಸವಾಲು ಮತ್ತು ನಾಯಕತ್ವ, ಮಹಿಳಾ ಶಕ್ತಿ ಮತ್ತು ಯಕ್ಷಗಾನದ ಮುಂದಿನ ಪೀಳಿಗೆ, ಯಕ್ಷಗಾನದ ಬೆಳವಣಿಗೆಯಲ್ಲಿ ಮಹಿಳೆಯರ ಪೂರಕ ಪಾತ್ರ, ಭವಿಷ್ಯದ ಯಕ್ಷಗಾನ-ಮಹಿಳೆಯರ ದೃಷ್ಟಿ ಮತ್ತು ದಿಕ್ಕು ಮುಂತಾದ ವಿಷಯಗಳಲ್ಲಿ ಜಯಂತಿ ಎಸ್. ಹೊಳ್ಳ ಕೃಷ್ಣಾಪುರ, ಲಲಿತಾ ಭಟ್ ಕುಳಾಯಿ, ನಿರ್ಮಲ ಹೆಗಡೆ ಶಿರಸಿ, ಪದ್ಮ ಆಚಾರ್ ಪುತ್ತೂರು, ವೃಂದಾ ಕೊನ್ನಾರ್ ಮುಂತಾದವರು ವಿಷಯ ಮಂಡಿಸಿದರು. ಡಾ. ಆರತಿ ಪಟ್ರಮೆ ತುಮಕೂರು ಸಂವಾದದ ಸಮಗ್ರ ಅವಲೋಕನ ನಡೆಸಿದರು.
ಯವ ಭಾಗವತೆ ಕು. ಹೇಮಸ್ವಾತಿ ಕುರಿಯಾಜೆ ಪ್ರಾರ್ಥನೆ ಹಾಡಿದರು. ಸುಮಿತ್ರಾ ಆರ್. ಮಯ್ಯ ಸ್ವಾಗತಿಸಿದರು. ಉಪಾನ್ಯಾಸಕಿ ಸಾಯಿಸುಮಾ ನಾವಡ ಕಾರ್ಯಕ್ರಮ ನಿರೂಪಿಸಿದರು.
ಸಮರೋಪ ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಮಹಿಳಾ ಕಲಾವಿದೆ ಪೂರ್ಣಿಮಾ ಯತೀಶ್ ರೈ ಸುರತ್ಕಲ್ ಹಾಗೂ ಕೃತಿ ಪುರಪ್ಪೆಮನೆ ಸಾಗರ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚಿನ ಮಹಿಳಾ ಕಲಾವಿದರು ಸಂವಾದದಲ್ಲಿ ಭಾಗವಹಿಸಿದರು. ಜಯಲಕ್ಷ್ಮಿ ಆರ್ ಹೊಳ್ಳ ವಂದಿಸಿದರು.



