ಬದಿಯಡ್ಕ: ವಾಹನಗಳಲ್ಲಿ ಹಿಂಬಾಲಿಸಿ ಬಂದುಹಲ್ಲೆ ನಡೆಸಿದ ಪರಿಣಾಮ ಬದಿಯಡ್ಕ ವಳಮಲೆ ನಿವಾಸಿ ಧ್ವನೀಶ್ ಶೆಟ್ಟಿ ಸಿ.ಆರ್ (18) ಮತ್ತು ಸ್ನೇಹಿತ ಬದಿಯಡ್ಕ ಯಶ್ವಂತ್ (19)ಗಾಯಗೊಂಡಿದ್ದಾರೆ. ಧ್ವನೀಶ್ ನೀಡಿದ ದೂರಿನನ್ವಯ ಶುಹೈಬ್ (26), ಬದಿಯಡ್ಕದ ಹಸನ್ ಶಹಲ್ (18) ಒಳಗೊಂಡಂತೆ ಐದು ಮಂದಿ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕದಿಂದ ಸ್ನೇಹಿತ ಯಶ್ವಂತ್ ಜತೆ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಬದಿಯಡ್ಕ ಸರ್ಕಲ್ ಬಳಿ ಸುಮಾರು 25 ಮಂದಿಯ ತಂಡವೊಂದು ತಮ್ಮ ವಿರುದ್ಧ ಕಾಲುಕೆರೆದುಜಗಳಕ್ಕೆ ಆಗಮಿಸಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆತೋರದೆ ಅಲ್ಲಿಂದ ಮನೆಗೆ ಮರಳುವ ಮಧ್ಯೆ ಎರಡು ಕಾರು ಮತ್ತು ಮೂರು ಸ್ಕೂಟರ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದ ತಂಡ ನನ್ನ ಮನೆ ಮುಂದೆ ನಮ್ಮನ್ನು ಹಾಗೂ ಸ್ನೇಹಿತನನ್ನು ತಡೆದು ನಿಲ್ಲಿಸಿ ಕಬ್ಬಿಣದ ಸಲಾಕೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳು ಧನೀಶ್ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ನಾನು ಈ ಹಿಂದೆ ಪೋಲೀಸರಿಗೆ ದೂರು ನೀಡಿದ್ದು, ಅದರ ದ್ವೇಷವೇ ಆರೋಪಿಗಳು ಹಲ್ಲೆ ನಡೆಸಿರುವುದಾಗಿ ಧನೀಶ್ ದೂರಿನಲ್ಲಿ ತಿಳಿಸಿದ್ದಾರೆ.

