HEALTH TIPS

ಇರಾನ್‌ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ: ಟ್ರಂಪ್ ಬೆದರಿಕೆಯ ಹಿಂದಿನ ಸಂದೇಶವೇನು?

ನ್ಯೂಯಾರ್ಕ್‌: 'ಇರಾನ್‌ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸಿ ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡಲಾಗುವುದು. ಇರಾನ್‌ಗೆ ಸಹಾಯ ಮಾಡುವ ಅಥವಾ ಆ ದೇಶದೊಂದಿಗೆ ವ್ಯವಹಾರ ಸಂಬಂಧ ಹೊಂದುವ ದೇಶಗಳೂ ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ. 


ಟ್ರಂಪ್‌ ಅವರು ಇರಾನ್‌ ಆರ್ಥಿಕತೆಯನ್ನು ಬುಡಮೇಲು ಮಾಡುವ, ಜಾಗತಿಕ ಮಟ್ಟದಲ್ಲಿ ಪ್ರತ್ಯೇಕಗೊಳಿಸುವ ಮಾರಕ ಆರ್ಥಿಕ ಸಮರ 'ಎಕನಾಮಿಕ್‌ ಡಿ-ಡೇ' ಘೋಷಿಸಿದ್ದಾರೆ. 'ಇದು ಹಿಂದೆಂದೂ ಕಂಡರಿಯದ ಅತ್ಯಂತ ಭೀಕರ ಆರ್ಥಿಕ ಕಾರ್ಯಾಚರಣೆ ಆಗಿರಲಿದೆ. ಅಮೆರಿಕ ಯಾವ ದೇಶದ ಮೇಲೂ ಇಂತಹ ಆರ್ಥಿಕ ಸಮರ ನಡೆಸಿಲ್ಲ. ಇದರ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ' ಎಂದು ಟ್ರಂಪ್‌ ಟ್ರೂತ್ ಸೋಷಿಯಲ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಇರಾನ್‌ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ: ಟ್ರಂಪ್ ಬೆದರಿಕೆಯ ಹಿಂದಿನ ಸಂದೇಶವೇನು?

ಒಂದು ಸಾಲಿನಲ್ಲಿಇರಾನ್‌ನ ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಕಠಿಣ ಆರ್ಥಿಕ ದಿಗ್ಬಂಧನದ ಉದ್ದೇಶ ಮತ್ತು ಅದರ ಜಾಗತಿಕ ಪರಿಣಾಮಗಳ ವಿಶ್ಲೇಷಣೆ.

ಏನು? ಏಕೆ? ಹೇಗೆ?


ಇರಾನ್ ಮೇಲೆ ಟ್ರಂಪ್ ವಿಧಿಸಿರುವ ದಿಗ್ಬಂಧನದ ಹಿಂದಿನ ಮುಖ್ಯ ಉದ್ದೇಶವೇನು?

ಇರಾನ್ ಅನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಏಕಾಂಗಿಯನ್ನಾಗಿ ಮಾಡುವುದು ಮತ್ತು ಆ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಮೂಲಕ ಆರ್ಥಿಕ ಸಮರವನ್ನು ತೀವ್ರಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ.


ಅಮೆರಿಕದ ದಿಗ್ಬಂಧನವು ಚೀನಾ ಮತ್ತು ಇತರ ದೇಶಗಳ ಮೇಲೆ ಯಾವ ಪ್ರಭಾವ ಬೀರುತ್ತದೆ?

ಇರಾನ್‌ನೊಂದಿಗೆ ವ್ಯವಹಾರ ನಡೆಸುವ ದೇಶಗಳೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ; ಆದರೆ, ಇರಾನ್‌ನ ತೈಲದ ಪ್ರಮುಖ ಗ್ರಾಹಕ ಚೀನಾವನ್ನು ನಿಯಂತ್ರಿಸುವುದು ಅಮೆರಿಕಕ್ಕೆ ಸವಾಲಿನ ವಿಷಯವಾಗಿದೆ.


ಟ್ರಂಪ್ ಆಡಳಿತವು ನೇರ ಯುದ್ಧದ ಬದಲಿಗೆ ಆರ್ಥಿಕ ದಿಗ್ಬಂಧನವನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ?

ಅಮೆರಿಕದ ಆಂತರಿಕ ರಾಜಕೀಯ ಒತ್ತಡ, ಆರ್ಥಿಕ ಹಿಂಜರಿತದ ಭೀತಿ ಮತ್ತು ದೊಡ್ಡ ಮಟ್ಟದ ವಾಯುದಾಳಿಗಳಿಂದ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಲು ಆರ್ಥಿಕ ದಿಗ್ಬಂಧನವನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ.


ಈ ದಿಗ್ಬಂಧನದಿಂದಾಗಿ ಅಮೆರಿಕದ ಮೇಲೆ ಆಗುತ್ತಿರುವ ಆಂತರಿಕ ಪರಿಣಾಮಗಳೇನು?

ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆ ಏರಿಕೆ, ಆರ್ಥಿಕ ಹಿಂಜರಿತದ ಆತಂಕ ಮತ್ತು ಸೇನಾ ಸಾಮಗ್ರಿಗಳ ಕೊರತೆಯು ದೇಶೀಯವಾಗಿ ಟ್ರಂಪ್ ಸರ್ಕಾರಕ್ಕೆ ತೀವ್ರ ಸವಾಲುಗಳನ್ನು ಒಡ್ಡಿದೆ.


ಪಶ್ಚಿಮ ಏಷ್ಯಾದಲ್ಲಿ ಈ ದಿಗ್ಬಂಧನ ಯಾವ ರೀತಿಯ ಬದಲಾವಣೆಗೆ ಕಾರಣವಾಗಬಹುದು?

ತಜ್ಞರ ಪ್ರಕಾರ, ಈ ಕ್ರಮವು ಇರಾನ್ ಅನ್ನು ಮಣಿಸುತ್ತದೆಯೋ ಅಥವಾ ಬದಲಿಗೆ ಪಶ್ಚಿಮ ಏಷ್ಯಾದಲ್ಲಿ ಮತ್ತಷ್ಟು ಅಸ್ಥಿರತೆ ಮತ್ತು ಯುದ್ಧದ ವಾತಾವರಣಕ್ಕೆ ದಾರಿ ಮಾಡಿಕೊಡುತ್ತದೆಯೋ ಎಂಬುದು ಅನಿಶ್ಚಿತವಾಗಿದೆ.

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಆರ್ಥಿಕ ದಿಗ್ಬಂಧನ ಹೇರಿದ್ದು ಯಾಕೆ?

ಇರಾನ್ ವಿರುದ್ಧ ಟ್ರಂಪ್ ಆಡಳಿತವು ಮತ್ತೊಮ್ಮೆ ಪೂರ್ಣ ಪ್ರಮಾಣದ ನೇರ ಯುದ್ಧಕ್ಕೆ ಇಳಿಯಲು ಸಿದ್ಧರಿಲ್ಲ ಎಂಬುದುವು ತಜ್ಞರ ಅಭಿಮತವಾಗಿದೆ.

ಇದಕ್ಕೆ ಪೂರಕವಾಗಿ, ಇರಾನ್ ವಿರುದ್ಧ ಮತ್ತೆ ದೊಡ್ಡ ಮಟ್ಟದ ವಾಯುದಾಳಿ ಅಥವಾ ನೇರ ಯುದ್ಧ ಆರಂಭವಾಗುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸಹ ಮಾರುಕಟ್ಟೆ ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ.

ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಮತ್ತು ಆರ್ಥಿಕತೆಯನ್ನು ಸ್ಥಿರವಾಗಿಡಲು ಗರಿಷ್ಠ ಆರ್ಥಿಕ ದಿಗ್ಬಂಧನಗಳನ್ನೇ ಅಸ್ತ್ರವಾಗಿಸಿಕೊಳ್ಳಲಾಗುತ್ತಿದೆ ಎಂಬುದು ಅವರ ಹೇಳಿಕೆಯ ಮರ್ಮವಾಗಿದೆ.

ಟ್ರಂಪ್ ಮುಂದಿರುವ ಪ್ರಮುಖ ಸವಾಲುಗಳು:

ಸೀಮಿತ ಸೇನಾ ಆಯ್ಕೆಗಳು:

ಈ ಹಿಂದಿನ ಬಾಂಬ್ ದಾಳಿಗಳ ಹೊರತಾಗಿಯೂ ಅಮೆರಿಕದ ನಿರ್ಬಂಧಗಳನ್ನು ಇರಾನ್‌ ಎದುರಿಸಿದೆ. ಹೊರ್ಮುಜ್ ಜಲಸಂಧಿಯ ಸಮೀಪ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ್ದರ ಪರಿಣಾಮ ತೈಲ ಸಾಗಣೆಗೆ ಅಡಚಣೆ ಉಂಟಾಗಿತ್ತಲ್ಲದೆ ಜಾಗತಿಕ ತೈಲ ಬೆಲೆ ಏರಿಕೆಗೆ ಕಾರಣವಾಗಿತ್ತು.

ಆಂತರಿಕವಾಗಿ ರಾಜಕೀಯ ಹಿನ್ನಡೆ:

ಅಮೆರಿಕದಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಬೆಲೆ ಪ್ರತಿ ಗ್ಯಾಲನ್‌ಗೆ 1 ಡಾಲರ್‌ಗೂ ಹೆಚ್ಚು ಏರಿಕೆಯಾಗಿದೆ. ಯುದ್ಧದಿಂದಾಗಿ ಅಮೆರಿಕದ ಯೋಧರು ಮೃತಪಟ್ಟಿದ್ದು, ಯುದ್ಧ ಸಾಮಗ್ರಿಗಳ ಕೊರತೆ ಎದುರಾಗಿದೆ. ಆರ್ಥಿಕ ಹಿಂಜರಿತದ ಭೀತಿ ಮತ್ತು ಮುಂಬರುವ ಮಧ್ಯಂತರ ಚುನಾವಣೆಗಳ ಹೊಸ್ತಿಲಿನಲ್ಲಿ ಈ ಯುದ್ಧ ದೇಶೀಯವಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಪ್ರತಿಸ್ಪರ್ಧಿಗೆ ಸಂದೇಶ:

ಟ್ರಂಪ್ ಯುದ್ಧದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಸಂದೇಶವು ಇರಾನ್ ನಾಯಕತ್ವಕ್ಕೆ ಸ್ಪಷ್ಟವಾಗಿ ತಲುಪಿದ್ದು, ಇದು ಅವರಲ್ಲಿ ಮತ್ತಷ್ಟು ಸೇನಾ ಒತ್ತಡ ಹೇರುವ ಧೈರ್ಯ ತುಂಬಬಹುದು ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಇರಾನ್ ಮೇಲೆ ಟ್ರಂಪ್ ಅವರ ನೌಕಾ ದಿಗ್ಬಂಧನವು ಬಾಂಬ್ ದಾಳಿಯಿಂದ ಉಂಟಾದ ಹಾನಿಯನ್ನು ಹೆಚ್ಚಿಸುವುದರೊಂದಿಗೆ, ಆಡಳಿತವು ಈಗಾಗಲೇ ಇರಾನ್ ಆರ್ಥಿಕತೆಯ ಮೇಲೆ ಅಸಾಧಾರಣ ಹಾನಿಯನ್ನು ಹೇರಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಚೀನಾವನ್ನು ಕಟ್ಟಿ ಹಾಕಲು ಸಾಧ್ಯವೇ?

ಇರಾನ್ ಅನ್ನು ಸಂಪೂರ್ಣವಾಗಿ ಆರ್ಥಿಕವಾಗಿ ಕಟ್ಟಿಹಾಕಬೇಕಾದರೆ, ಅದರೊಂದಿಗೆ ವಹಿವಾಟು ನಡೆಸುವ ದೇಶಗಳನ್ನು ತಡೆಯಬೇಕಾಗುತ್ತದೆ. ಇತ್ತೀಚೆಗಷ್ಟೇ ಯುಎಇ, ಇರಾನ್ ಜೊತೆಗಿನ ವಹಿವಾಟು ಸ್ಥಗಿತಗೊಳಿಸಿದೆ. ಆದರೆ, ಇರಾನ್‌ನ ಕಚ್ಚಾ ತೈಲದ ಬಹುಪಾಲು ಖರೀದಿದಾರ ದೇಶ ಚೀನಾ ಆಗಿದೆ.

ಚೀನಾದ ಮೇಲೆ ನಿರ್ಬಂಧ ಹೇರದೆ ಇರಾನ್ ಆರ್ಥಿಕತೆಯನ್ನು ಪೂರ್ಣವಾಗಿ ಮುರಿಯುವುದು ಅಸಾಧ್ಯ. ಆದರೆ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಮುಂಬರುವ ಶೃಂಗಸಭೆಯ ಹಿನ್ನೆಲೆಯಲ್ಲಿ ಅಮೆರಿಕ ಚೀನಾದೊಂದಿಗೆ ನೇರ ಆರ್ಥಿಕ ಸಂಘರ್ಷಕ್ಕೆ ಇಳಿಯಲು ಹಿಂದೇಟು ಹಾಕುವ ಸಾಧ್ಯತೆಯೇ ಹೆಚ್ಚಾಗಿದೆ.

ಟ್ರಂಪ್ ಆಡಳಿತವು ಚೀನಾದ ಮೇಲೆ ಒತ್ತಡ ಹೇರುವ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ ಎಂದು ವಿಶ್ಲೇಷಕರು ನಿರೀಕ್ಷಿಸುತ್ತಾರೆ.

ತಜ್ಞರ ಅಭಿಮತ:

ಮಾಜಿ ರಾಜತಾಂತ್ರಿಕ ಡೆನ್ನಿಸ್ ರಾಸ್ ಪ್ರಕಾರ, ಅಮೆರಿಕದ ಇರಾನ್ ನೀತಿಯು ಮುಂದಾಲೋಚನೆಯಿಲ್ಲದೆ ಕೇವಲ ತಕ್ಷಣದ ಹೆಜ್ಜೆಗಳನ್ನಷ್ಟೇ ಅವಲಂಬಿಸಿದೆ. ಹಾಗಾಗಿ ತೈಲ ಬೆಲೆ ಏರಿಕೆ, ಸೇನಾ ಶಸ್ತ್ರಾಸ್ತ್ರಗಳ ಕೊರತೆ ಮತ್ತು ರಾಜಕೀಯ ಒತ್ತಡಗಳ ನಡುವೆ, ಆರ್ಥಿಕ ಸಮರವು ಇರಾನ್ ಅನ್ನು ಮಣಿಸುತ್ತದೆಯೋ ಅಥವಾ ಪಶ್ಚಿಮ ಏಷ್ಯಾದಲ್ಲಿ ಮತ್ತಷ್ಟು ಅಸ್ಥಿರತೆಗೆ ದಾರಿಯಾಗುತ್ತದೆಯೋ ಕಾದುನೋಡಬೇಕಿದೆ.

(ಆಧಾರ: ನ್ಯೂಯಾರ್ಕ್ ಟೈಮ್ಸ್‌)







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries