ಕುಂಬಳೆ: ಇಚ್ಲಂಗೋಡು ದೇವಸ್ಥಾನಕ್ಕೆ ಸಮೀಪ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂದಿಸಿದ್ದಾರೆ.ಮೀಯಪದವು ಬೇರಿಕೆ ನಿವಾಸಿ ದೀಕ್ಷಿತ್ (25), ಮೊಗ್ರಾಲ್ ಪುತ್ತೂರು ಎಡಚ್ಚೇರಿಯ ಮಹೇಶ್ ಕೆ (40), ಜೋಡುಕಲ್ಲಿನ ಪ್ರಕಾಶ್ ಶೆಟ್ಟಿ (60), ಮೀಯಪದವು ಅಡ್ಕತ್ತಗುರಿ ನಿವಾಸಿ ಗಂಗಾಧರ ಮೂಲ್ಯ(63) ಪೈವಳಿಕೆ ನಗರ ಮರಿಕ್ಕ ನಿವಾಸಿ ಐತ್ತಪ್ಪ(40)ಬಂಧಿತರು. ಇವರಿಂದ ಐದು ಅಂಕದ ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂಬಳೆ ಠಾಣೆ ಎಸ್‍ಐ ಗಣೇಶನ್ ಕೆ ಪಿ ನೇತೃತ್ವದ ಪೋಲೀಸರ ತಂಡ ದಾಳಿ ನಡೆಸಿದೆ. 80ಕ್ಕೂ ಹೆಚ್ಚುಮಂದಿ ಕೋಳಿಅಂಕದಲ್ಲಿ ಪಾಲ್ಗೊಂಡಿದ್ದು, ಪೊಲೀಸರನ್ನು ಕಂಡು ಓಡಿ ಪರಾರಿಯಾಗಿದ್ದರು.


