HEALTH TIPS

ಕಾಸರಗೋಡು ಜಿಲ್ಲಾ ಓಣಂ ಸಪ್ತಾಹ ಆಚರಣೆಗಳು ಮುಕ್ತಾಯ: ಜಿಲ್ಲೆಯ ಸೌಹಾರ್ದತೆ ಮತ್ತು ಸಹೋದರತ್ವವನ್ನು ಪ್ರದರ್ಶಿಸಿದ ಆಚರಣೆ ಎಂದ ಸಚಿವ ಕೆ.ಎಂ. ಶಾಜಿ

ಕಾಸರಗೋಡು: ಕಾಸರಗೋಡು ಜಿಲ್ಲಾ ಓಣಂ ಸಪ್ತಾಹ ಆಚರಣೆಗಳು ವರ್ಣಮಯವಾಗಿ ಮುಕ್ತಾಯಗೊಂಡವು. ಕಾಸರಗೋಡಿನ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಉದ್ಘಾಟಿಸಿದರು. ಓಣಂ ಎಂದರೆ ಮನುಷ್ಯ ದೇವರನ್ನು ಅಸೂಯೆಪಡುವ ಹಂತಕ್ಕೆ ಬೆಳೆದ ಕಾಲದ ನೆನಪುಗಳನ್ನು ಹುಟ್ಟುಹಾಕುವ ಆಚರಣೆ ಎಂದು ಸಚಿವ ಕೆ.ಎಂ. ಶಾಜಿ ಹೇಳಿದರು. ಒಂದು ವಾರದ ಕಾಲ ನಡೆದ ಈ ಆಚರಣೆ ಕಾಸರಗೋಡಿನ ಸಹೋದರತ್ವ ಮತ್ತು ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದರು.


ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದ್ದರು.

ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಮತ್ತು ಚಲನಚಿತ್ರ ನಟ ಉಣ್ಣಿರಾಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷೆ ಹಾಗೂ ಹಣಕಾಸು ಸಮಿತಿ ಸಂಚಾಲಕ ಹನೀಫ ಕೆ.ಎಂ, ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಬಾಲನ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಕುಂಞÂ ಕೆ.ಎ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ ಸೈಪುಲ್ಲಾ ತಂಙಳ್, ಕಾಸರಗೋಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಉಷಾ ಅರ್ಜುನ್, ಕುಂಬ್ಡಾಜೆ ಪಂಚಾಯತ್ ಅಧ್ಯಕ್ಷೆ ಯಶೋಧ, ಚೆಂಗಳ ಪಂ.ಅಧ್ಯಕ್ಷ ವಸಂತ ಅಜೆಕ್ಕೋಡು, ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಬೆಳ್ಳೂರು ಪಂ. ಅಧ್ಯಕ್ಷೆ ಮಾಲಿನಿ, ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಚೆಮ್ಮನಾಡು ಪಂ. ಅಧ್ಯಕ್ಷೆ ಆಯೇಷಾ ಅಬೂಬಕ್ಕರ್, ಕಾಸರಗೋಡು ನಗರಸಭೆ ಸದಸ್ಯ ರವಿ ಪೂಜಾರಿ ಮಾತನಾಡಿದರು.


ಮೆರವಣಿಗೆ ಸಮಿತಿ ಅಧ್ಯಕ್ಷ ಸಿ.ವಿ. ಜೇಮ್ಸ್, ಪ್ರಚಾರ ಸಮಿತಿ ಅಧ್ಯಕ್ಷ ಅನ್ವರ್ ಕೋಳಿಯಡ್ಕ, ಪ್ರಚಾರ ಸಮಿತಿ ಸಂಚಾಲಕ ಜಾಫರ್ ಕಮಾಲ್, ಗ್ರಾಮ ಪಂಚಾಯಿತಿ ಸಂಘದ ಅಧ್ಯಕ್ಷ ಕೆ.ಬಿ. ಮುಹಮ್ಮದ್ ಕುಂಞÂ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಕಾಸರಗೋಡು ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ., ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾಸರಗೋಡು ನಗರಸಭೆ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯೆ ಸುಕುಮಾರಿ ಉಪಸ್ಥಿತರಿದ್ದರು.

ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಐಯುಎಂಎಲ್ ಪ್ರತಿನಿಧಿ ಎ. ಅಬ್ದುಲ್ ರೆಹಮಾನ್, ಸಿಪಿಐ (ಎಂ) ಪ್ರತಿನಿಧಿ ಟಿ.ಎಂ.ಎ. ಕರೀಂ, ಸಿಪಿಐ ಪ್ರತಿನಿಧಿ ಟಿ. ಕೃಷ್ಣನ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಸಿ.ಎ. ನಸೀಬ್ ಮತ್ತು ಇತರ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ವ್ಯಕ್ತಿಗಳು ಮಾತನಾಡಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಮತ್ತು ಬ್ಲಾಕ್ ಪಂಚಾಯತ್ ಸದಸ್ಯ ಅಶ್ರಫ್ ಕಾರ್ಲೆ ಸ್ವಾಗತಿಸಿ. ಕಾಸರಗೋಡು ಡಿಟಿಪಿಸಿ ಕಾರ್ಯದರ್ಶಿ ಜೆ.ಕೆ. ಜಿಜೇಶ್ ಕುಮಾರ್. ವಂದಿಸಿದರು. ಮೆರವಣಿಗೆಯಲ್ಲಿ, ಚೆಮ್ಮನಾಡ್ ಗ್ರಾಮ ಪಂಚಾಯತ್ ಪ್ರಥಮ ಸ್ಥಾನ, ಕಾಸರಗೋಡು ನಗರಸಭೆ ಎರಡನೇ ಸ್ಥಾನ ಮತ್ತು ಚೆಂಗಳ ಗ್ರಾಮ ಪಂಚಾಯತ್ ಮೂರನೇ ಸ್ಥಾನ ಗಳಿಸಿತು. ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಕಲ್ಲಟ್ರ ಮಾಹಿನ್, ಸಂಚಾಲಕ ಮಾಹಿನ್ ಕೇಳೋಟ್ ಹಾಗೂ ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಿದರು. ಕಲ್ಲಟ್ರ ಮಾಹಿನ್ ಹಾಗೂ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಬಹುಮಾನ ವಿತರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries