HEALTH TIPS

ಷಡಾನನ ಯೂತ್ ಕ್ಲಬ್ ಮತ್ತು ವಾಚನಾಲಯದಲ್ಲಿ ಸ್ವಾತಂತ್ರ್ಯೋತ್ಸವ

ಬದಿಯಡ್ಕ: ಮವ್ವಾರು ಶ್ರೀ ಷಡಾನನ ಯೂತ್ ಕ್ಲಬ್ ಮತ್ತು ವಾಚನಾಲಯದಲ್ಲಿ ಶನಿವಾರ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ  ಆಚರಿಸಲಾಯಿತು.

ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣವನ್ನು ಕುಂಬ್ಡಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ನಿರ್ವಹಿಸಿದರು. ಬಳಿಕ ಧ್ವಜವಂದನೆ ಸಲ್ಲಿಸಲಾಯಿತು. ಸಂಧ್ಯಾ ಕೊರೆಕ್ಕಾನ ಅವರು ದೇಶಭಕ್ತಿ ಗಾಯನವನ್ನು ಹಾಡಿದರು. ಸಭಾ ಕಾರ್ಯಕ್ರಮದಲ್ಲಿ ರವೀಂದ್ರ ರೈ ಅವರು ಮಾತನಾಡಿದರು. ಕೇರಳ ಗ್ರಾಮೀಣ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಎಡಪ್ಪಾಡಿ ಕೃಷ್ಣಮೂರ್ತಿ ಅವರು ಮಾತನಾಡಿ, ದೇಶವು ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿ ಜನರಲ್ಲಿ ದೇಶಭಕ್ತಿಯು ಜಾಗೃತಿ ಗೊಳ್ಳಬೇಕೆಂದು ಹೇಳಿದರು. ವಾಚನಾಲಯದ ಅಧ್ಯಕ್ಷ  ಗಂಗಾಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾತನಾಡಿದರು.ನಂತರ ಸಂಧ್ಯಾ ಕೊರೆಕ್ಕಾನ ಅವರು ಸ್ವರಚಿತ ದೇಶಭಕ್ತಿಗಾನ ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಸೀತಾರಾಮ ಭಟ್ ಮುಂಗಿಲ, ಗಂಗಾಧರ ರೈ ಮಠದಮೂಲೆ, ಗಂಗಾಧರ.ಯಂ., ವಳಕ್ಕುಂಜ ಗಣಪತಿ ಭಟ್, ಪಾರ್ವತಿ ಟೀಚರ್, ವೆಂಕಟರಮಣ  ಭಟ್ ನಾರಂಪಾಡಿ, ವಿಘ್ನೇಶ್ವರ ಮಾಸ್ತರ್, ಗ್ರಂಥಪಾಲಕಿ ವಿದ್ಯಾಶಂಕರಿ  ಮೊದಲಾದವರು ಭಾಗವಹಿಸಿದ್ದರು. ನಂತರ ಸಿಹಿತಿನಿಸು ವಿತರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries