ಬದಿಯಡ್ಕ: ಉಂಡೆಮನೆ ದಿ. ಸತ್ಯಶಂಕರ ಭಟ್ಟರ ಪತ್ನಿ ಯು. ರತ್ನಾವತಿ (59) ಮಂಗಳವಾರ ಬೆಳಗ್ಗೆ ನೀರ್ಚಾಲು ಪೆಟೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಮಕ್ಕಳಾದ ಲಕ್ಷೀ, ಶಂಕರ ತೇಜಸ್ವಿ, ನವನೀತ ಕೃಷ್ಣ, ಅಳಿಯ, ಸೊಸೆಯಂದಿರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

-U%20RATHNAVATHI.jpg)
