ನವದೆಹಲಿ (PTI): ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ದೆಹಲಿ ನ್ಯಾಯಾಲಯ ಬುಧವಾರ ವಿಚಾರಣೆಗೆ ಅಂಗೀಕರಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ರಚಿಸಲಾಗಿದ್ದ ತ್ವರಿತಗತಿ ನ್ಯಾಯಾಲಯಕ್ಕೆ 13 ಆರೋಪಿಗಳ ವಿರುದ್ಧ ಆರೋಪ ಹೊರಿಸಿ ಸಿಬಿಐ ಇತ್ತೀಚೆಗೆ ಅಂತಿಮ ವರದಿ ಸಲ್ಲಿಸಿತ್ತು.
ನ್ಯಾಯಾಧೀಶ ಅಜಯ್ ಗುಪ್ತಾ ಅವರು ವಿಚಾರಣೆಗೆ ಪರಿಗಣಿಸಿದರು. ಗುರುವಾರದಿಂದ ಈ ಸಂಬಂಧ ನ್ಯಾಯಾಲಯ ವಿಚಾರಣೆ ಆರಂಭಿಸುವ ಸಾಧ್ಯತೆ ಇದೆ.
'ಕೆಲವು ಸಾಕ್ಷಿಗಳು ವಯಸ್ಕರಲ್ಲದೇ ಇದ್ದರೂ ಅವರ ಹೆಸರುಗಳು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿವೆ. ಆರೋಪ ಪಟ್ಟಿಯ ಕೆಲವು ಅಂಶಗಳನ್ನು ಮಾಧ್ಯಮಗಳಲ್ಲಿ ಪ್ರಕಟ ಮಾಡಲಾಗಿದೆ' ಎಂದು ನ್ಯಾಯಾಲಯದ ಕಲಾಪದ ವೇಳೆ ಸಿಬಿಐ ತಿಳಿಸಿತು. 'ನ್ಯಾಯಾಲಯದಲ್ಲಿ ಪ್ರಸ್ತಾಪ ಆಗದ ಚಾರ್ಜ್‌ಶೀಟ್‌ನಲ್ಲಿಇರುವ ಎಲ್ಲ ಅಂಶಗಳನ್ನು ಮಾಧ್ಯಮಗಳಲ್ಲಿ ಬಹಿರಂಗಗೊಳಿಸುವುದು ಆತಂಕಕಾರಿ' ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

