ಮಂಜೇಶ್ವರ: ವಾಹನಕ್ಕೆ ಡೀಸೆಲ್ ತುಂಬಿಸಿದ ಬಳಿಕ ಹಣ ನೀಡದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೊಲೀಸರು ಹರಿಜಾಲ್ ಚೌಕಿ ವಾಸಿ ಅಹಮ್ಮದ್ ಮುವಾಸ್ (22) ಎಂಬಾತನನ್ನು ಬಂಧಿಸಿದ್ದಾರೆ. ಈತನ ಥಾರ್ ವಾಹನ ವಶಪಡಿಸಿಕೊಂಡು, ನೋಟೀಸುನೀಡಿ ಬಿಡುಗಡೆಗೊಳಿಸಿದ್ದಾರೆ.
ಉಪ್ಪಳ ಹಿದಾಯತ್ ನಗರದ ಪೆಟ್ರೋಲ್ ಬಂಕ್‍ಗೆ ಕಳೆದಗಿನ 7ರಂದು ರಾತ್ರಿ 9.15ಕ್ಕೆ ತಲುಪಿದ ಮಹೀಂದ್ರ ಥಾರ್ ಜೀಪ್ ಗೆ 4,282 ರೂ.ಮೊತ್ತದ ಡೀಸೆಲ್ ತುಂಬಿಸಿ, ಆನಂತರ ಗೂಗಲ್ ಪೇ ಮೂಲಕ ಹಣ ಪಾವತಿಸುವುದಾಗಿ ವಾಹನದ ಚಾಲಕ ತಿಳಿಸಿ ಅಲ್ಲಿಂದ ಮರಳಿದ್ದಾನೆ. ಆದರೆ ಖಾತೆ ತಪಾಸಣೆ ನಡೆಸಿದಾಘ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಪೆಟ್ರೋಲ್ ಪಂಪಿನ ದಿಲೀಪ್ ಕುಮಾರ್ ಅವರು ಮಂಜೇಶ್ವರ ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು.

