HEALTH TIPS

ನೇಪಾಳ ಪ್ರವಾಹ: ಟಿ-ಶರ್ಟ್ ಪ್ರದರ್ಶಿಸಿ ಹೆಲಿಕಾಪ್ಟರ್ ಏರಿ ಜೀವ ಉಳಿಸಿಕೊಂಡ ಬಾಲಕ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನೊಬ್ಬನನ್ನು ಸಾಹಸಮಯವಾಗಿ ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಡಾಡುತ್ತಿದೆ. 


ಪ್ರವಾಹದ ನೀರಿನಿಂದ ಸುತ್ತವರಿದಿದ್ದ ಮನೆಯ ಛಾವಣಿಯ ಮೇಲೆ ನಿಂತಿದ್ದ ಬಾಲಕ, ರಕ್ಷಣಾ ಹೆಲಿಕಾಪ್ಟರ್‌ನ ಗಮನ ಸೆಳೆಯಲು ತಾನು ಧರಿಸಿದ್ದ ಟಿ-ಶರ್ಟ್ ಅನ್ನು ಬಿಚ್ಚಿ ಬೀಸಿದ್ದಾನೆ (ಪ್ರದರ್ಶಿಸಿದ್ದಾನೆ).

ಬಾಲಕ ನೀಡಿದ ಸಂಕೇತವನ್ನು ಗಮನಿಸಿದ ನೇಪಾಳ ಸೇನೆಯ ಹೆಲಿಕಾಪ್ಟರ್, ತಕ್ಷಣವೇ ಮನೆಯ ಮೇಲ್ಛಾವಣಿಯ ತೀರಾ ಸಮೀಪಕ್ಕೆ ಬಂದಿದೆ. ಹೆಲಿಕಾಪ್ಟರ್ ಹತ್ತಿರಕ್ಕೆ ಬರುತ್ತಿದ್ದಂತೆ, ಬಾಲಕ ಅದರ ಲ್ಯಾಂಡಿಂಗ್ ಸ್ಕಿಡ್ ಅನ್ನು ಹಿಡಿದುಕೊಂಡಿದ್ದಾನೆ. ಆ ವೇಳೆ ಹೆಲಿಕಾಪ್ಟರ್‌ನ ಬಾಗಿಲಿನಲ್ಲಿ ಕುಳಿತಿದ್ದ ಸೇನಾ ಸಿಬ್ಬಂದಿಯೊಬ್ಬರು ತಕ್ಷಣವೇ ಕೈಚಾಚಿ ಬಾಲಕನ ಕೈಹಿಡಿದು ಮೇಲಕ್ಕೆ ಎಳೆದುಕೊಂಡಿದ್ದಾರೆ.

ಈ ತೀವ್ರ ಕುತೂಹಲ ಹಾಗೂ ಆತಂಕದ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದ ಜನಸ್ತೋಮ, ಬಾಲಕ ಕ್ಷೇಮವಾಗಿ ಹೆಲಿಕಾಪ್ಟರ್ ಏರುತ್ತಿದ್ದಂತೆ ಚಪ್ಪಾಳೆ ತಟ್ಟಿ ಆನಂದಿಸಿದ್ದಾರೆ.


ರಕ್ಷಣಾ ಕಾರ್ಯಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನೇಪಾಳ ಸೇನೆಯ ಪೈಲಟ್‌ಗಳ ಧೈರ್ಯ ಮತ್ತು ಸಾಹಸವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries