HEALTH TIPS

ಪತ್ರಕರ್ತ ಕೆ.ಎಂ. ಬಶೀರ್ ಕೊಂದ ವ್ಯಕ್ತಿಯಿಂದ ಬಹುಮಾನ ಸ್ವೀಕರಿಸಲಾರೆವೆಂದು ಪ್ರತಿಭಟನೆ: ಕೋಝಿಕ್ಕೋಡ್ ನಲ್ಲಿ ನಾಟಕೀಯ ವಿದ್ಯಮಾನ

ಕೋಝಿಕ್ಕೋಡ್: ಪತ್ರಕರ್ತ ಕೆ.ಎಂ. ಬಶೀರ್ ಅವರನ್ನು ಕಾರಿನಿಂದ ಡಿಕ್ಕಿ ಹೊಡೆದು ಕೊಂದ ಪ್ರಕರಣದ ಮೊದಲ ಆರೋಪಿ ಕೃಷಿ ಇಲಾಖೆ ನಿರ್ದೇಶಕ ಶ್ರೀರಾಮ್ ವೆಂಕಟರಾಮನ್ ವಿರುದ್ಧ ಕೋಝಿಕ್ಕೋಡ್ ಪ್ರತಿಭಟನೆ ವ್ಯಕ್ತವಾಗಿದೆ. 


ಈಜು ಸ್ಪರ್ಧೆಯ ವಿಜೇತರು ಶ್ರೀರಾಮ್ ವೆಂಕಟರಾಮನ್ ಅವರಿಂದ ಬಹುಮಾನ ಸ್ವೀಕರಿಸಲು ನಿರಾಕರಿಸಿದರು. ಪೋಷಕರ ಪ್ರತಿಭಟನೆಯ ನಂತರ, ಕೋಝಿಕ್ಕೋಡ್ ಸಹಾಯಕ ಕಲೆಕ್ಟರ್ ಬಹುಮಾನವನ್ನು ಹಸ್ತಾಂತರಿಸಿದರು.

ಓಣಂ ಆಚರಣೆಯ ಜೊತೆಗೆ ಕ್ಯಾಲಿಕಟ್ ಪೆಡಲ್ಸ್ ಎಂಬ ಸಂಸ್ಥೆ ಆಯೋಜಿಸಿದ್ದ ಈಜು ಸ್ಪರ್ಧೆಯ ವೇದಿಕೆಯಲ್ಲಿ ನಾಟಕೀಯ ದೃಶ್ಯಗಳು ನಡೆದವು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕೃಷಿ ಇಲಾಖೆಯ ನಿರ್ದೇಶಕ ಶ್ರೀರಾಮ್ ವೆಂಕಟರಾಮನ್ ಅವರು ಬಹುಮಾನ ನೀಡಲು ವೇದಿಕೆಗೆ ಬಂದಾಗ, ಈಜು ಸ್ಪರ್ಧೆಯ ವಿಜೇತರ ಪೆÇೀಷಕರು ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದರು.

ಪತ್ರಕರ್ತ ಕೆ.ಎಂ. ಬಶೀರ್ ಅವರನ್ನು ಕಾರಿನಿಂದ ಡಿಕ್ಕಿ ಹೊಡೆದು ಕೊಂದ ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್ ವೆಂಕಟರಾಮನ್ ಅವರಿಂದ ಬಹುಮಾನವನ್ನು ಸ್ವೀಕರಿಸುವುದಿಲ್ಲ ಎಂದು ಪೆÇೀಷಕರು ನಿಲುವು ತೆಗೆದುಕೊಂಡರು.

ಸಂಘಟಕರು ಮನವೊಲಿಸಲು ಪ್ರಯತ್ನಿಸಿದರೂ, ಪೆÇೀಷಕರು ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದರು. ಕೊನೆಗೆ, ಸಂಘಟಕರು ಮಧ್ಯಪ್ರವೇಶಿಸಿ ಶ್ರೀರಾಮ್ ವೆಂಕಟರಾಮನ್ ಅವರನ್ನು ಬಹುಮಾನ ವಿತರಣಾ ಸಮಾರಂಭದಿಂದ ತೆಗೆದುಹಾಕಿದರು. ನಂತರ ಸ್ಥಳದಲ್ಲಿದ್ದ ಕೋಝಿಕ್ಕೋಡ್‍ನ ಸಹಾಯಕ ಕಲೆಕ್ಟರ್ ಬಹುಮಾನವನ್ನು ಹಸ್ತಾಂತರಿಸಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries