HEALTH TIPS

ಕಾಂಗ್ರೆಸ್ ನಾಯಕನನ್ನು ಆಲಂಗಿಸಿ, 'ಇದು ಮೋದಿಯ ವಿದೇಶಾಂಗ ನೀತಿ' ಎಂದು ವ್ಯಂಗ್ಯವಾಡಿದ ರಾಹುಲ್ ಗಾಂಧಿ

ನವದೆಹಲಿವೇದಿಕೆಯ ಮೇಲೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಆಲಂಗಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ವ್ಯಂಗ್ಯವಾಡಿದರು. 


ಕಾಂಗ್ರೆಸ್ ನ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಂದೀಪ್ ದೀಕ್ಷಿತ್ ಅವರನ್ನು ಆಲಂಗಿಸುವ ಮುನ್ನ, 'ಅವರು ಈ ಉಪಾಯವನ್ನು ಎಲ್ಲಿಂದ ಪಡೆದುಕೊಂಡರು ಎಂಬುದು ನನಗೆ ತಿಳಿದಿಲ್ಲ.

ವಿಚಿತ್ರ ಉಪಾಯಗಳು ಜನರ ತಲೆ ಹೊಕ್ಕುತ್ತವೆ. ಅವರು ಇದನ್ನೇ ವಿದೇಶಾಂಗ ನೀತಿ ಎಂದು ಭಾವಿಸಿದ್ದಾರೆ' ಎಂದು ಹೇಳಿದರು.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ವಿದೇಶಿ ನಾಯಕರನ್ನು ಆಲಂಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಗೇಲಿ ಮಾಡಲೆಂದೇ ರಾಹುಲ್ ಗಾಂಧಿ ಈ ರೀತಿ ವ್ಯಂಗ್ಯವಾಡಿದರು.

'ನೀವು ನನ್ನನ್ನು ಮೆಲೋನಿ ಎಂದು ತಿಳಿದುಕೊಂಡು ಆಲಂಗಿಸಲಿಲ್ಲ ತಾನೆ?' ಎಂದು ಸಂದೀಪ್ ದೀಕ್ಷಿತ್ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ರಾಹುಲ್ ಗಾಂಧಿ, 'ನಾನಿನ್ನೂ ಆ ಹಂತ ತಲುಪಿಲ್ಲ' ಎಂದು ಉತ್ತರಿಸಿದರು. ಈ ಮಾತಿಗೆ ಸಭೆಯಲ್ಲಿ ನಗೆಗಡಲು ಹರಿಯಿತು.

►ಬಿಜೆಪಿ, RSS ವಿರುದ್ಧ ಟೀಕೆ

ಇದೇ ವೇಳೆ ಬಿಜೆಪಿ ಮತ್ತು RSS ವಿರುದ್ಧವೂ ರಾಹುಲ್ ಗಾಂಧಿ ತೀಕ್ಷ್ಣ ವಾಗ್ದಾಳಿ ನಡೆಸಿದರು. 'ಅವರು ಜೋಕರ್ಗಳ ಗುಚ್ಛವಾಗಿದ್ದು, ವಿದೂಷಕರಾಗಿದ್ದಾರೆ. ಅವರಿಗೆ ಭಾರತದ ಇತಿಹಾಸ, ಸಂಸ್ಕೃತಿ ಅಥವಾ ಹಾಲಿ ವಾಸ್ತವದ ಬಗ್ಗೆ ಯಾವುದೇ ತಿಳಿವಳಿಕೆಯಿಲ್ಲ' ಎಂದು ಅವರು ಟೀಕಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries