HEALTH TIPS

ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ಪ್ರಸ್ತಾವ: ಇದರಿಂದ ಏನು ಪ್ರಯೋಜನ?

ನವದೆಹಲಿ: ದೇಶದ ಪ್ರತಿಯೊಬ್ಬ ನೋಂದಾಯಿತ ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಐಎನ್‌ಎಂಸಿ) ಪ್ರಸ್ತಾವ ಸಲ್ಲಿಸಿದೆ. 


ಇದರಿಂದ ವೈದ್ಯರು ದೇಶದ ಯಾವುದೇ ರಾಜ್ಯದಲ್ಲಿ ವೈದ್ಯಕೀಯ ಸೇವೆ ಮಾಡಲು ಆಯಾ ರಾಜ್ಯದಿಂದ ಮತ್ತೆ ಹೊಸದಾಗಿ ನೋಂದಣಿ ಅಥವಾ ಪರವಾನಗಿ ಪಡೆಯುವ ಅಗತ್ಯ ಇರುವುದಿಲ್ಲ.

ಈ ಪ್ರಸ್ತಾವವು ವೈದ್ಯಕೀಯ ವೃತ್ತಿಪರರ ನೋಂದಣಿ ಮತ್ತು ವೈದ್ಯಕೀಯ ವೃತ್ತಿ ಪರವಾನಗಿ (ತಿದ್ದುಪಡಿ) ನಿಯಮಗಳು, 2026ರ ಕರಡಿನ ಭಾಗವಾಗಿದೆ.

ಈ ನಿಯಮದ ಪ್ರಕಾರ, ಯಾವುದೇ ವ್ಯಕ್ತಿ ವೈದ್ಯಕೀಯ ಪದವಿ ಪಡೆದ ಬಳಿಕ ವೈದ್ಯ ವೃತ್ತಿಗೆ ಸೇರುವ ಮುನ್ನ ಆಯಾ ರಾಜ್ಯದ ವೈದ್ಯಕೀಯ ಮಂಡಳಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ ಕೂಡಲೇ ಐಎನ್‌ಎಂಸಿ ಮತ್ತು ವೈದ್ಯಕೀಯ ನೋಂದಣಿ ಮಂಡಳಿಯು ಅವರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಿದೆ.

ಈ ಸಂಖ್ಯೆಯನ್ನು ಹೊಂದಿರುವ ವೈದ್ಯರು ಭಾರತದ ಯಾವುದೇ ರಾಜ್ಯದಲ್ಲಾದರೂ ಕಾನೂನುಬದ್ಧವಾಗಿ ವೈದ್ಯ ವೃತ್ತಿ ಮಾಡಬಹುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries