ಕಾಸರಗೋಡು: ನಗರದ ಎಂ.ಜಿ ರಸ್ತೆಯಲ್ಲಿ ಸ್ಕೂಡರ್ ಟ್ಯಾಂಕರ್ ಲಾರಿಗೆ ಡಿಕ್ಕಿಯಾದ ಪರಿಣಾಮ ವಿದ್ಯಾನಗರ ಬಿ.ಸಿ ರೋಡ್‍ನಲ್ಲಿರುವ ಫೈಕ್ಸ್ ಅಂಗಡಿಯ ಮಾಲೀಕ, ತಳಂಗರೆ ಬಾಂಗೋಡು ನಿವಾಸಿ ಹನೀಫಾ (55)ಸಾವಿಗೀಡಾಗಿದ್ದಾರೆ.
ಹನೀಫಾ ಅವರು ಬುಧವಾರ ಸ್ಕೂಟರ್‍ನಲ್ಲಿ ಹೊಸ ಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣಕ್ಕೆ ಸಂಚರಿಸುವ ಮಧ್ಯೆ, ಇವರುಸಂಚರಿಸುತ್ತಿದ್ದ ಸ್ಕೂಟರ್ ಟ್ಯಾಂಕರ್ ಲಾರಿಗೆ ಡಿಕ್ಕಿಯಾಗಿತ್ತು. ಈ ವೇಳೆ ಸ್ಕೂಟರ್‍ನಿಂದ ಬಿದ್ದ ಹನೀಫಾ ಅವರ ಕಾಲಿನ ಮೇಲೆ ಲಾರಿಯ ಚಕ್ರ ಹರಿದು ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಜನರಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ನಂತರ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಹನೀಫಾ ಗುರುವಾರ ಸಾವಿಗೀಡಾಗಿದ್ದಾರೆ. ಕಾಸರಗೋಡು ನಗಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

