HEALTH TIPS

ಮೋದಿ ಗುಂಡಿಕ್ಕಿದರೂ ವಂದೇ ಮಾತರಂ ಪೂರ್ಣ ಹಾಡಲ್ಲ: ಕಾಂಗ್ರೆಸ್ ಸಂಸದ

ತಿರುವನಂತಪುರ: ಕೇರಳಂನಲ್ಲಿ 'ವಂದೇ ಮಾತರಂ'ನ ಪೂರ್ಣ ಆವೃತ್ತಿಯನ್ನು ಈ ಜನ್ಮದಲ್ಲಿ ಎಂದೂ ಹಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಭಾನುವಾರ ಹೇಳಿದ್ದಾರೆ. 


ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡುವ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಯಾವುದೇ ನಿರ್ದೇಶನ ಬಂದಿರುವ ಬಗ್ಗೆ ತಮಗೆ ತಿಳಿದಿಲ್ಲ.

ಆದರೂ, ನರೇಂದ್ರ ಮೋದಿ ನಮ್ಮನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದರೂ ಪೂರ್ಣವಾಗಿ ಹಾಡುವುದಿಲ್ಲ ಎಂದು ಉಣ್ಣಿತ್ತಾನ್ ಹೇಳಿದ್ದಾರೆ.

'ಈವರೆಗೆ ವಂದೇ ಮಾತರಂ ಅನ್ನು ಹೇಗೆ ಹಾಡಲಾಗುತ್ತಿದೆಯೋ ಮುಂದೆಯೂ ಹಾಗೆಯೇ ಹಾಡಲಾಗುತ್ತದೆ. ಅದಕ್ಕಿಂತ ಹೆಚ್ಚೇನನ್ನೂ ಹಾಡುವುದಿಲ್ಲ' ಎಂದು ಅವರು ದೃಢವಾಗಿ ಹೇಳಿದ್ದಾರೆ.

'ರಾಜ್ಯಗಳ ಲೋಕ ಭವನಗಳು ಕೀಳುಮಟ್ಟದ ರಾಜಕೀಯದ ಕೇಂದ್ರಗಳಾಗಿವೆ. ರಾಜ್ಯಪಾಲರು ಈಗ ಹಣದ ಬಲದಿಂದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ರಾಜ್ಯಪಾಲರಿಂದ ಯಾವ ನ್ಯಾಯವನ್ನು ನಿರೀಕ್ಷಿಸಬಹುದು? ಅವರೆಲ್ಲರೂ ಕೇಂದ್ರ ಸರ್ಕಾರದ ಭಟ್ಟಂಗಿಗಳಾಗಿ ಬದಲಾಗಿದ್ದಾರೆ' ಎಂದು ಅವರು ಪ್ರತಿಪಾದಿಸಿದ್ದಾರೆ.

'ಈ ಜನ್ಮದಲ್ಲಂತೂ ನಾವು ವಂದೇ ಮಾತರಂ'ನ ಸಂಪೂರ್ಣ ಗಾಯನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ',ಎಂದಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries