HEALTH TIPS

ಮೂತ್ರಪಿಂಡದ ವೈಫಲ್ಯ ತಡೆಯುವುದು ಹೇಗೆ? ಇಂದಿನಿಂದಲೇ ಜಾರಿಗೆ ತರಬೇಕಾದ ಉತ್ತಮ ಹವ್ಯಾಸಗಳಿವು

 ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಮೂತ್ರಪಿಂಡ ರಕ್ಷಣೆಯ ಬಗ್ಗೆ ವಿವರಿಸಿರುವ ಡಾ.ಸುನೀತ್ ಸಿಂಗ್ ಅವರು 1998ರಿಂದ ಮೂತ್ರಪಿಂಡಶಾಸ್ತ್ರ ವಿಭಾಗದ ಸದಸ್ಯರಾಗಿದ್ದಾರೆ. ಅವರು ಪ್ರಸ್ತುತ ವ್ಯಾಂಕೋವರ್ ಜನರಲ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಅಸೋಸಿಯೇಟ್ ಪ್ರೊಫೆಸರ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾರೆ. 


ಡಾ. ಸುನೀತ್ ಸಿಂಗ್ ಅವರ ಪ್ರಕಾರ, ಆರೋಗ್ಯಕರ ಮೂತ್ರಪಿಂಡಗಳನ್ನು ಕಾಪಾಡಿಕೊಳ್ಳಲು ಕೆಲವು ಮುಖ್ಯ ಅಭ್ಯಾಸಗಳನ್ನು ಹೊಂದಿರಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಸಾಕಷ್ಟು ನೀರು ಕುಡಿಯುವುದು, ಕಾಲಕಾಲಕ್ಕೆ ರಕ್ತದೊತ್ತಡ ಮೇಲ್ವಿಚಾರಣೆ ಮಾಡುವುದು, ಮಧುಮೇಹ ಪರೀಕ್ಷಿಸಿಕೊಳ್ಳುವುದು ಮತ್ತು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಸೇರಿವೆ. ಮೂತ್ರಪಿಂಡ ವೈಫಲ್ಯ ಅಥವಾ ಮೂತ್ರಪಿಂಡದ ಸಮಸ್ಯೆಗಳನ್ನು ತಪ್ಪಿಸಲು ಏನು ಪ್ರಾರಂಭಿಸಬೇಕು ಮತ್ತು ನಿಲ್ಲಿಸಬೇಕು ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಮೂತ್ರಪಿಂಡ ವೈಫಲ್ಯ ತಪ್ಪಿಸಲು ಅವರು ನೀಡಿದ ನಾಲ್ಕು ಮುಖ್ಯ ಸಲಹೆಗಳು ಹೀಗಿವೆ:

* ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು

* ವ್ಯಾಯಾಮ. ವಿಶಿಷ್ಟ ಶಿಫಾರಸು: ವಾರಕ್ಕೆ 120 ನಿಮಿಷಗಳು

* ಮಧುಮೇಹದ ಕುರಿತು ನಿಗಾವಣೆ

ನಿಮ್ಮ ಮೂತ್ರದಲ್ಲಿ ರಕ್ತವಿದ್ದರೆ ಅಥವಾ ನಿಮಗೆ ವಿವರಿಸಲಾಗದ ಊತ ಬಂದರೆ ತಕ್ಷಣ ವೈದ್ಯರನ್ನು ಭೇಟಿ ನೀಡಿ.

ವೃತ್ತಿಪರ ವೈದ್ಯರನ್ನು ಭೇಟಿ ಮಾಡದೆ ಮೆಡಿಕಲ್ ಗಳು ಅಥವಾ ಇತರ ರೀತಿಯಲ್ಲಿ ಔಷಧಿ ತೆಗೆದುಕೊಳ್ಳದಂತೆ ಮೂತ್ರಪಿಂಡಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಸುನೀತ್ ಸಿಂಗ್ ಅವರು ತಮ್ಮ ಜೀವನದಲ್ಲಿ ಸದಾ ಅನುಸರಿಸುವ ಮತ್ತೊಂದು ವಿಚಾರವೆಂದರೆ ಹೆಚ್ಚು ನೀರು ಕುಡಿಯುವುದು.

ಅವರ ಪ್ರಕಾರ, ಕುಡಿಯುವ ನೀರು ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ರಕ್ತದ ಕೆಮಿಸ್ಟ್ರಿಯನ್ನು ನಿಯಂತ್ರಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ಗಳನ್ನು ಸಮತೋಲನದಲ್ಲಿರಿಸುತ್ತದೆ.

ಎಲೆಕ್ಟ್ರೋಲೈಟ್ ನೀರನ್ನು ಶಿಫಾರಸು ಮಾಡುತ್ತಾರೆಯೇ ಅಥವಾ ಸರಳ ನೀರನ್ನು ಶಿಫಾರಸು ಮಾಡುತ್ತಾರೆಯೇ ಎನ್ನುವ ಪ್ರಶ್ನೆಗೆ ಸುನೀತ್ ಸಿಂಗ್, "ಹೆಚ್ಚಿನ ಜನರಿಗೆ ದೇಹಕ್ಕೆ ನೀರು ಬೇಕಾಗುತ್ತದೆ. ವ್ಯಾಯಾಮ ಮಾಡಿದರೂ ಸಹ ದೇಹದಲ್ಲಿ ಎಲೆಕ್ಟ್ರೋಲೈಟ್ ಬದಲಿಸುವ ಮಟ್ಟದಲ್ಲಿ ವ್ಯಾಯಾಮ ಮಾಡುವುದಿಲ್ಲ. ನೀರಿನ ರುಚಿ ಉತ್ತಮವಾಗುತ್ತದೆ ಎನ್ನುವ ಕಾರಣಕ್ಕೆ ಎಲೆಕ್ಟ್ರೋಲೈಟ್ ಬಳಸುತ್ತಾರೆ. ಎಲೆಕ್ಟ್ರೋಲೈಟ್ ನಿಮ್ಮನ್ನು ನೀರು ಕುಡಿಯಲು ಪ್ರೋತ್ಸಾಹಿಸುತ್ತಿದ್ದರೆ, ರಕ್ತಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಿಕೊಂಡಿದ್ದರೆ ಮತ್ತು ಮೂತ್ರಪಿಂಡ ಕಾರ್ಯದಲ್ಲಿ ಎಲ್ಲವೂ ಸರಿಯಾಗಿದ್ದರೆ ಎಲೆಕ್ಟ್ರೋಲೈಟ್ಗಳನ್ನು ಬಳಸುವುದು ಸರಿ" ಎಂದು ಸಲಹೆ ನೀಡಿದ್ದಾರೆ.

ಸುನೀತ್ ಸಿಂಗ್ ಪ್ರಕಾರ, ನಿತ್ಯವೂ ಜನರು ಎರಡೂವರೆ ಲೀಟರ್ ನೀರು ಕುಡಿಯಬೇಕು. ನಿತ್ಯವೂ ಸೇವಿಸುವ ಆಹಾರದಲ್ಲಿರುವ ನೀರಿಗೆ ಸೇರ್ಪಡೆಯಾಗಿ ಇಷ್ಟು ನೀರನ್ನು ಸೇವಿಸಬೇಕು! 







Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries