
ಟಿಬೆಟ್‌ನ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟುಮಾಡಿದೆ

ಟಿಬೆಟ್ ಗಡಿಯಿಂದ ರಭಸವಾಗಿ ನುಗ್ಗಿದ ಕೆಸರುಮಿಶ್ರಿತ ನೀರಿನಲ್ಲಿ ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ

ಕೆಸರು, ಕಲ್ಲುಗಳು, ಕಟ್ಟಡಗಳ ಅವಶೇಷಗಳೊಂದಿಗೆ ನುಗ್ಗುತ್ತಿರುವ ನೀರು ಭೋಟೆ ಕೋಶಿ ನದಿ ಪಾತ್ರದುದ್ದಕ್ಕೂ ಹಾನಿ ಉಂಟುಮಾಡುತ್ತಿರುವುದು, ದಟ್ಟ ಮಂಜು ಆವರಿಸಿರುವ ದೃಶ್ಯಗಳು ಎದೆಝಲ್ಲೆನಿಸುವಂತಿವೆ

ಇನ್ನೊಂದೆಡೆ ಭೋರ್ಗರೆವ ನೀರು ಕಂಡು ಜನ ಭಯಭೀತರಾಗಿ ಓಡುತ್ತಿರುವ ದೃಶ್ಯಗಳು ಬೆಚ್ಚಿಬೀಳಿಸಿವೆ.

ನೇಪಾಳದ ಲೆಂಡೆ ನದಿಯಲ್ಲಿ ಹಿಮಪಾತದಿಂದ ಉಂಟಾದ ದಿಢೀರ್ ಪ್ರವಾಹವು ಕೆಲವೇ ಕ್ಷಣಗಳಲ್ಲಿ ರಸುವಾ, ನುವಾಕೋಟ್, ಧಾಡಿಂಗ್ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟು ಮಾಡಿದೆ.

ಮನೆ, ನೆಲೆ ಎಲ್ಲವನ್ನೂ ಕಳೆದುಕೊಂಡ ಜನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ದಿಕ್ಕೆಟ್ಟಿದ್ದರು.

ತ್ರಿಶೂಲಿ, ಭೋಟೆ ಕೋಶಿ ನದಿಯ ಮೂಲಕ ರಭಸವಾಗಿ ಹರಿದ ಕೆಸರು ಮಿಶ್ರಿತ ನೀರಿನಲ್ಲಿ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ

ನೇಪಾಳ-ಚೀನಾ ಗಡಿಯ ಈಶಾನ್ಯಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ ಲೆಂಡೆ ಖೋಲಾ ನದಿಯಲ್ಲಿ ಸಂಭವಿಸಿದ ಹಿಮಪಾತವೇ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ.

'ಪ್ರವಾಹವು ಭೀಕರವಾಗಿದೆ. ಅದು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹಾನಿ ಮಾಡಿರಬಹುದು' ಎಂದು ನೇಪಾಳ ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಫ್ಲೆ ಹೇಳಿದ್ದಾರೆ.

ಕೆಸರು ಮಿಶ್ರಿತ ನೀರಿನಲ್ಲಿ ಅನೇಕ ವಾಹನಗಳು ಹೂತುಹೋಗಿದ್ದವು

ಭೋರ್ಗರೆವ ಕೆಸರು ನೀರಿನಿಂದ ಜೀವ ಉಳಿಸಿಕೊಳ್ಳಲು ಜೆಸಿಬಿ ಏರಿ ಹೊರಟ ಜನ

ನದಿ ನೀರಿನ ರಭಸಕ್ಕೆ ಸೇತುವೆಯೊಂದು ಕೊಚ್ಚಿಹೋಗಿ, ಗ್ರಾಮದ ಸಂಪರ್ಕ ಕಡಿತಗೊಂಡಿದೆ

ಕೆಸರು, ಮಣ್ಣು ಮಿಶ್ರಿತ ನೀರು ಹರಿಯುತ್ತಿರುವುದು

ನೇಪಾಳ ಸೇನೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸೇನೆಯ ವೈದ್ಯಕೀಯ ಸಿಬ್ಬಂದಿ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ.


