ಇಸ್ಲಾಮಾಬಾದ್: ಇಲ್ಲಿನ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 14 ನವಜಾತ ಶಿಶುಗಳು ಮೃತಪಟ್ಟಿವೆ. 'ವಾರ್ಡ್‌ನಲ್ಲಿ 15 ಶಿಶುಗಳಿದ್ದವು.
ವೈದ್ಯರು ಒಂದು ಮಗುವನ್ನು ರಕ್ಷಿಸಿದ್ದಾರೆ. ರಕ್ಷಣಾ ತಂಡದವರು ಕಾರ್ಯಾಚರಣೆ ನಡೆಸಿ, ತ್ವರಿತವಾಗಿ ಬೆಂಕಿಯನ್ನು ನಿಯಂತ್ರಿಸಿದರು. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ತನಿಖೆಗಾಗಿ ತಂಡವನ್ನು ರಚಿಸಲಾಗಿದೆ' ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದ್ದಾರೆ.
'ವಾರ್ಡ್‌ನಲ್ಲಿ ಆಮ್ಲಜನಕ ಪೈಪ್ ಗಳಿದ್ದ ಕಾರಣಕ್ಕೆ ವೇಗವಾಗಿ ಬೆಂಕಿ ಹಬ್ಬಿದೆ. ಈ ವೇಳೆ ಇಬ್ಬರು ವೈದ್ಯರು, ಶುಶ್ರೂಷಕಿಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೂಡ ವಾರ್ಡ್‌ನಲ್ಲಿ ಇದ್ದರು' ಎಂದು ಸಚಿವ ತಾರಿಖ್ ಫಝಲ್ ಚೌಧರಿ ತಿಳಿಸಿದ್ದಾರೆ.
'ಕೆಲವು ಶಿಶುಗಳ ಗುರುತು ಪತ್ತೆ ಯಾಗದ ಕಾರಣ ಡಿಎನ್‌ಎ ಪರೀಕ್ಷೆಗಾಗಿ ಪೋಷಕರನ್ನು ಸಂಪರ್ಕಿ ಸಲಾಗಿದೆ' ಎಂದು ಆರೋಗ್ಯ ಸಚಿವ ಮುಸ್ತಫ್ ಕಮಲ್ ಮಾಹಿತಿ ನೀಡಿದರು.

