HEALTH TIPS

ಹಾರ್ಮುಝ್ ಸಂಚಾರ ಶುಲ್ಕದ ಆದಾಯ ಹಂಚಿಕೊಳ್ಳಲು ಇರಾನ್, ಒಮಾನ್ ಒಪ್ಪಿಗೆ

ಟೆಹರಾನ್: ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಸಂಚಾರ ಶುಲ್ಕದಿಂದ ಬರುವ ಆದಾಯವನ್ನು ಹಂಚಿಕೊಳ್ಳಲು ಇರಾನ್ ಮತ್ತು ಒಮಾನ್ ಒಪ್ಪಿಕೊಂಡಿವೆ ಎಂದು ಇರಾನ್ನ ರೆವೊಲ್ಯೂಷನರಿ ಗಾರ್ಡ್ಸ್ (Iಖಉಅ) ಬುಧವಾರ ತಿಳಿಸಿದೆ.

ಹಾರ್ಮುಝ್ ಜಲಸಂಧಿಯು ಇರಾನ್ ಮತ್ತು ಒಮಾನ್ ದೇಶಕ್ಕೆ ಸೇರಿದ್ದಾಗಿದೆ.


ಒಮಾನ್ ಜೊತೆಗಿನ ಮಾತುಕತೆಯ ಸಮಯದಲ್ಲಿ, ಜಲಸಂಧಿಯ ನೀರಿನಲ್ಲಿ ಪ್ರತಿಯೊಂದು ದೇಶದ ಪಾಲು ಹಾಗೂ ಅದರ ಆದಾಯದಲ್ಲಿ ಇರಾನ್ ಮತ್ತು ಒಮನ್ನ ಪಾಲಿಗೆ ಸಂಬಂಧಿಸಿದಂತೆ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು IRGC ವಕ್ತಾರ ಹುಸೇನ್ ಮೊಹೆಬಿ ಹೇಳಿದ್ದಾರೆ.

ಇರಾನ್ ಮತ್ತು ಒಮಾನ್ ಮಂಗಳವಾರ ಜಲಸಂಧಿಯ ಮೂಲಕ ಜಂಟಿ ತಾತ್ಕಾಲಿಕ ನೌಕಾಯಾನ ಕಾರಿಡಾರ್ ಕುರಿತು ಚರ್ಚಿಸಿದ್ದು, ಅಲ್ಲಿರುವ ಸ್ಫೋಟಕಗಳನ್ನು ತೆರವುಗೊಳಿಸಲು ಒಪ್ಪಿಕೊಂಡಿವೆ. ತಾತ್ಕಾಲಿಕ ಕಾರಿಡಾರ್ ಮತ್ತು ಸುರಕ್ಷಿತ ನೌಕಾಯಾನವನ್ನು ಮರುಸ್ಥಾಪಿಸುವ ವ್ಯವಸ್ಥೆಗಳನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಒಮಾನ್ ವಿದೇಶಾಂಗ ಇಲಾಖೆ ಭರವಸೆ ವ್ಯಕ್ತಪಡಿಸಿದೆ.

ಇರಾನ್ ಮತ್ತು ಒಮಾನ್ ನಡುವಿನ ಮಾತುಕತೆಗೆ ಅಡೆತಡೆ ಉಂಟುಮಾಡಲು ಅಮೆರಿಕ ಪ್ರಯತ್ನಿಸುತ್ತಿದ್ದು, ಇದರಿಂದಾಗಿ ಒಪ್ಪಂದ ವಿಳಂಬವಾಗಿದೆ. ಅಮೆರಿಕವು ಅಡ್ಡಿಪಡಿಸುವುದನ್ನು ನಿಲ್ಲಿಸಿದರೆ ತಲುಪಿರುವ ಒಪ್ಪಂದದ ಚೌಕಟ್ಟಿನೊಳಗೆ ನಾವು ಹಾರ್ಮುಝ್ ಜಲಸಂಧಿಯನ್ನು ತೆರೆಯಬಹುದು. ಒಂದು ವೇಳೆ ಅಮೆರಿಕ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳದಿದ್ದರೆ, ಯಾವುದೇ ಪರಿಸ್ಥಿತಿಯಲ್ಲೂ ಹಾರ್ಮುಝ್ ಜಲಸಂಧಿಯನ್ನು ತೆರೆಯಲಾಗುವುದಿಲ್ಲ ಎಂದು IRGC ಹೇಳಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries