ಪೆರ್ಲ: ಎಣ್ಮಕಜೆ ಪಂಚಾಯಿತಿ ಕಜಂಪಾಡಿ ನಿವಾಸಿ, ಕಜಂಪಾಡಿ ತರವಾಡು ಮನೆಯ ಸುಬ್ರಹ್ಮಣ್ಯ ಭಟ್(99)ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಸಂಘ ಪರಿವಾರದ ಅಭಿಮಾನಿಯಾಗಿದ್ದರು. ಪೆರ್ಲ ಶ್ರೀ ಶಂಕರ ಸದನ, ಪೆರ್ಲದ ನಾಲಂದಾ ಕಾಲೇಜು ಪೋಷಕರಾಗಿದ್ದರು.
ಪೆರ್ಲದ ಖ್ಯಾತ ವೈದ್ಯ, ಕಜಂಪಾಡಿ ನರ್ಸಿಂಗ್‍ಹೋಮ್ ಮಾಲಿಕ ಡಾ.ಶ್ರೀಪತಿ ಭಟ್ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ.

