ಕಾಸರಗೋಡು: ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಆ. 14ರಂದು ಕಾಸರಗೋಡು ಜಿಲ್ಲೆಗೆ ಭೇಟಿನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಬೆಳಗ್ಗೆ 9ಕ್ಕೆ ಕುಂಬಳೆ ಗ್ರಾಮ ಪಂಚಾಯಿತಿಯ 'ಟೇಕ್ ಎ ಬ್ರೇಕ್' ಸೌಲಭ್ಯದ ಉದ್ಘಾಟನೆ, 10ಕ್ಕೆ ಉಕ್ಕಿನಡ್ಕದಲ್ಲಿನ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ
ಮಧ್ಯಾಹ್ನ 3.30ಕ್ಕೆ ಕಲನಾಡ್‍ನಲ್ಲಿ ಸಾರ್ವಜನಿಕ ಕಾರ್ಯಕ್ರಮ, ಸಂಜೆ 5.30ಕ್ಕೆ ಪಚ್ಚಂಬಳ್ಳದಲ್ಲಿ ಪಂಚಾಯತ್ ಉದ್ಯಾನವನದ ಉದ್ಘಾಟನೆ, 6ಕ್ಕೆ ಪಚ್ಚಂಬಳ್ಳದಲ್ಲಿ ಹಾಗೂ 7ಕ್ಕೆ ಅದಿಞಲ್‍ನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

