ಕುಂಬಳೆ: ರಾಜ್ಯದ ಮೊದಲ ಡಿಜಿಟಲ್ ಚೌಕ ಕುಂಬಳೆ ಜಿ.ಎಸ್.ಬಿ.ಎಸ್. ಶಾಲೆಯಲ್ಲಿ ಉದ್ಘಾಟನೆಗೆ ಸಿದ್ದಗೊಂಡಿದೆ. ಪ್ರಾಥಮಿಕ ತರಗತಿಗಳಲ್ಲಿ ಐ.ಟಿ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು, ಮಕ್ಕಳಲ್ಲಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು, ಡಿಜಿಟಲ್ ಸಾಧನಗಳನ್ನು ಸ್ವಅಧ್ಯಯನದ ಸಾಧನವನ್ನಾಗಿ ಮಾಡುವುದು ಮತ್ತು ಆರೋಗ್ಯಕರ ಡಿಜಿಟಲ್ ಮತ್ತು ಬ್ರೌಸಿಂಗ್ ಸಂಸ್ಕøತಿಯನ್ನು ಬೆಳೆಸುವ ಗುರಿಯೊಂದಿಗೆ, ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯು ಕೈಟ್ ನೇತೃತ್ವದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಜಾರಿಗೆ ತರಲಾಗುತ್ತಿರುವ ಡಿಜಿಟಲ್ ಸ್ಕ್ವೇರ್ ಎಂಬ ನವೀನ ಯೋಜನೆಯ ಉದ್ಘಾಟನೆಯನ್ನು ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಜಿ.ಎಸ್.ಬಿ.ಎಸ್. ಕುಂಬಳೆ ಶಾಲೆಯಲ್ಲಿ ನಾಳೆ ನಾಡಿಗೆ ಸಮರ್ಪಿಸುವರು.
ವರ್ಣರಂಜಿತ ಗೋಡೆ ವರ್ಣಚಿತ್ರಗಳು, ಲ್ಯಾಪ್‍ಟಾಪ್‍ಗಳು ಮತ್ತು ಆಸನ ವ್ಯವಸ್ಥೆಗಳಿಂದ ಅಲಂಕರಿಸಲ್ಪಟ್ಟ ವಿಶಿಷ್ಟ ಡಿಜಿಟಲ್ ಚೌಕವನ್ನು ಪಿ.ಟಿ.ಎ., ಶಿಕ್ಷಕರು ಮತ್ತು ಜಿ.ಎಸ್.ಬಿ.ಎಸ್. ಕುಂಬಳೆ ಶಾಲಾ ಮಕ್ಕಳು ಉದ್ಘಾಟನೆಗಾಗಿ ಸಿದ್ಧಪಡಿಸಿದ್ದಾರೆ.
ಏನೇನಿದೆ?:
1ನೇ ತರಗತಿಯಿಂದ 7ನೇ ತರಗತಿ ವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆ ತರಲಾಗುತ್ತಿದೆ. ಕೈಟ್ ಒದಗಿಸುವ ಕಸ್ಟಮೈಸ್ಡ್ ಪೋಸ್, ಅಲ್ಲದೆ ಸ್ಕ್ರಾಚ್-ಬ್ಲಾಕ್ ಕೋಡಿಂಗ್, ಟಕ್ಸ್ ಪೈಂಟ್-ಡ್ರಾಯಿಂಗ್, ಪೆನ್ಸಿಲ್ 2ಡಿ ಅನಿಮೇಶನ್, ಮ್ಯೂಸಿಕ್ ಟೂಲ್ಸ್, ಲ್ಯಾಂಗೇಜ್ ಲ್ಯಾಬ್, ಡಿಜಿಟಲ್ ವರ್ಕ್‍ಶೀಟ್, ಟೆಸ್ಟ್ ಬುಕ್, ಪೋಡ್ ಕಾಸ್ಟ್, ಕಲಿಕಾ ಸಂಬಂಧಿ ಇತರ ವಿಷಯಗಳು ಇರಲಿವೆ.

.webp)
