HEALTH TIPS

ಹೊರ್ಮುಜ್‌ ಜಲಸಂಧಿ 'ಅಮೆರಿಕದ ಭಾಗ' ಎಂದು ಟ್ರಂಪ್ ಪುನರುಚ್ಚಾರ: ಇರಾನ್ ಕೆಂಡಾಮಂಡಲ

 ವಾಷಿಂಗ್ಟನ್/ಟೆಹರಾನ್: ಹೊರ್ಮುಜ್‌ ಜಲಸಂಧಿ ಅಮೆರಿಕದ ಭಾಗ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪುನರುಚ್ಚರಿಸಿದ್ದಾರೆ. ಈ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುವ ತಮ್ಮ ಬೆದರಿಕೆಯನ್ನು ಮುಂದುವರಿಸಿದ್ದಾರೆ. 


ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ರೂಥ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, 'ಹೊಸ ಅಮೆರಿಕನ್ ಭಾಗ' ಎಂದು ಗುರುತಿಸಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಇರಾನ್‌ನೊಂದಿಗೆ ಅಣು ಒಪ್ಪಂದದ ಸಾಧ್ಯತೆ ಕುರಿತು ಮಾತನಾಡುತ್ತಾ, 'ಅದು ಅಮೆರಿಕದ ಭಾಗವಾಗಿದೆ' ಎಂದಿದ್ದಾರೆ.

ಅಮೆರಿಕ ನೌಕಾಪಡೆಯು ಹೊರ್ಮುಜ್‌ ಜಲಸಂಧಿ ದಾಟಲು ಇದುವರೆಗೆ 1,000ಕ್ಕೂ ಹೆಚ್ಚು ಹಡಗುಗಳಿಗೆ ಭದ್ರತೆ ನೀಡಿದೆ. ಅಲ್ಲದೆ, ಜಲಸಂಧಿಯ ಮೂಲಕ ಒಂದೇ ದಿನದಲ್ಲಿ ಸುಮಾರು 16 ಮಿಲಿಯನ್ ಬ್ಯಾರಲ್ ತೈಲ ಸಾಗಣೆಯಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

'ಮೇ ತಿಂಗಳಿನಿಂದ ಇದುವರೆಗೆ 1,300 ವಾಣಿಜ್ಯ ಹಡಗುಗಳಿಗೆ ಅಮೆರಿಕ ಪಡೆಗಳು ಭದ್ರತೆ ಒದಗಿವೆ' ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ. ಆದರೆ, ಇರಾನ್ ಈ ಪ್ರತಿಪಾದನೆಯನ್ನು ತಳ್ಳಿಹಾಕಿದ್ದು, ಜಲಸಂಧಿಯನ್ನು ಯಾವುದೇ ಕಾರಣಕ್ಕೂ ಮತ್ತೆ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೊರ್ಮುಜ್‌ ಜಲಸಂಧಿ ಕುರಿತು ಟ್ರಂಪ್ ಹಂಚಿಕೊಂಡಿರುವ ಚಿತ್ರ

ಇರಾನ್ ತಿರುಗೇಟು...

ಟ್ರಂಪ್ ಹೇಳಿಕೆ ಖಂಡಿಸಿರುವ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್‌ ರೆಜಾಯಿ, 'ಅಮೆರಿಕ ತನ್ನ ಆಕ್ರಮಣಕಾರಿ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಈ ಕುರಿತು ಬದ್ಧತೆಯನ್ನು ತೋರಬೇಕು. ಇಲ್ಲವಾದಲ್ಲಿ ಹೊರ್ಮುಜ್‌ ಜಲಸಂಧಿ ಮುಚ್ಚಿರುತ್ತದೆಯೇ ಹೊರತು, ಮತ್ತೆ ತೆರೆಯುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಕೇವಲ ಮಾತುಕತೆಯಿಂದಷ್ಟೇ ಇದು ಬಗೆಹರಿಯುವುದಿಲ್ಲ. ಅಮೆರಿಕ ತನ್ನ ನಡವಳಿಕೆಯಲ್ಲಿ ಬದಲಾವಣೆ ತರಬೇಕು' ಎಂದು ಮೊಹ್ಸೆನ್‌ ಪ್ರತಿಪಾದಿಸಿದ್ದಾರೆ.

ಒಮಾನ್‌ ಮತ್ತು ಇರಾನ್ ನಡುವೆ ಇರುವ ಹೊರ್ಮುಜ್‌ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಯ ಶೇ 20ರಷ್ಟು ಪಾಲನ್ನು ನಿರ್ವಹಿಸುವ ಅತ್ಯಂತ ಪ್ರಮುಖ ಜಲಮಾರ್ಗವಾಗಿದೆ. ಇರಾನ್ ನಿಯಂತ್ರಣವನ್ನು ಪ್ರತಿಪಾದಿಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಬೆಂಬಲದೊಂದಿಗೆ ಮತ್ತು ಒಮಾನ್‌ ಮಾರ್ಗದ ಮೂಲಕ ಹಡಗುಗಳ ಸಂಚಾರ ಕ್ರಮೇಣ ಹೆಚ್ಚುತ್ತಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಈ ವಾಗ್ವಾದವು ಜಾಗತಿಕ ಮಟ್ಟದಲ್ಲಿ ತೈಲ ಮಾರುಕಟ್ಟೆ ಮತ್ತು ಕಡಲ ಭದ್ರತೆಯ ಮೇಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries