ನವದೆಹಲಿ: ಭಾರತೀಯ ರೈಲ್ವೆಯು ಶುಕ್ರವಾರ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ಡಬಲ್ ಡೆಕ್ಕರ್ ಕಂಟೇನರ್ಗಳ ಅತ್ಯಂತ ಉದ್ದದ ಸರಕು ರೈಲಿಗೆ ಮುಂಬೈನ ಜವಾಹರ್ ಲಾಲ್ ನೆಹರು ಪೋರ್ಟ್ ಟ್ರಸ್ಟ್ನಿಂದ (ಜೆಎನ್ಪಿಟಿ) ಚಾಲನೆ ನೀಡಲಾಯಿತು.
ರೈಲು 36 ಡಬಲ್ ಕಂಟೇನರ್ಗಳನ್ನು ಹೊಂದಿದ್ದು, 422 ಕಿ.ಮೀ ದೂರದಲ್ಲಿರುವ ವಡೋದರಾ ವಿಭಾಗದಲ್ಲಿರುವ ವರ್ನಾಮಾದ ಗತಿಶಕ್ತಿ ಕಾರ್ಗೊ ಟರ್ಮಿನಲ್ಗೆ ತಲುಪಿದೆ.
'ಶುಕ್ರವಾರ ಸಂಜೆ 7 ಗಂಟೆಗೆ ಇಲ್ಲಿಂದ ಹೊರಟಿದ್ದು, 2015 ಟನ್ಗಳಷ್ಟು ಸರಕು ಸಾಗಾಟ ಮಾಡಿದೆ. ಆ ಮೂಲಕ ಒಂದೇ ಕಾರ್ಯಾಚರಣೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆ ಮಾಡುವ ಮೂಲಕ ಇಲಾಖೆಯು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಏಕಕಾಲಕ್ಕೆ ಬೃಹತ್ ಪ್ರಮಾಣದಲ್ಲಿ ಕಂಟೇನರ್ಗಳನ್ನು ಸಾಗಿಸುವ ಮೂಲಕ ಬಂದರು ಹಾಗೂ ರೈಲ್ವೆ ಟರ್ಮಿನಲ್ಗಳಲ್ಲಿ ಸಮಯ ಉಳಿತಾಯವಾಗಲಿದೆ. ದಟ್ಟಣೆಯನ್ನು ಕಡಿಮೆ ಮಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ಸರಕುಗಳ ರವಾನೆ ಸಾಧ್ಯವಾಗಲಿದೆ. ರೈಲು ಮಾರ್ಗದಲ್ಲಿನ ಒತ್ತಡ ಕಡಿಮೆಯಾಗಿ, ವೆಚ್ಚವೂ ಕೂಡ ಕಡಿಮೆಯಾಗಲಿದೆ. ರಸ್ತೆಗಳಲ್ಲಿ ಟ್ರಕ್ಗಳ ಸಂಚಾರ ಕಡಿಮೆಯಾಗಿ, ರಸ್ತೆಗಳ ಮೇಲಿನ ದಟ್ಟಣೆ ಹಾಗೂ ಮಾಲಿನ್ಯವು ಇಳಿಕೆಯಾಗಲಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

