HEALTH TIPS

ತಮಿಳುನಾಡು: ನೀಟ್‌, ಎಫ್‌ಸಿಆರ್‌ಎ ವಿರುದ್ಧ ನಿರ್ಣಯ ಅಂಗೀಕಾರ; ಬಿಜೆಪಿ ಸಭಾತ್ಯಾಗ

ಚೆನ್ನೈ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ 'ನೀಟ್‌' ರದ್ದುಗೊಳಿಸಿ, ದ್ವಿತೀಯ ಪಿಯು ಅಂಕಗಳನ್ನು ಆಧರಿಸಿಯೇ ವೈದ್ಯಕೀಯ ಕೋರ್ಸ್‌ಗಳ ‍ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ತಮಿಳುನಾಡು ವಿಧಾನಸಭೆಯು ಮಂಗಳವಾರ ನಿರ್ಣಯ ಅಂಗೀಕರಿಸಿದೆ. 


'ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ'ಯನ್ನು (ಎಫ್‌ಸಿಆರ್‌ಎ) ಈಗಿರುವ ರೂಪದಲ್ಲಿ ಅಂಗೀಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧವೂ ಸದನವು ನಿರ್ಣಯ ತೆಗೆದುಕೊಂಡಿದೆ.

ನಿರ್ಣಯ ಮಂಡಿಸಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಕೆ.ಜಿ. ಅರುಣ್‌ರಾಜ್‌, 'ನೀಟ್‌ ಎನ್ನುವುದು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ರಾಜ್ಯಗಳ ಹಕ್ಕಿನ ವಿರುದ್ಧವಾಗಿದೆ' ಎಂದು ತಿಳಿಸಿದರು.

'ತಮಿಳು ಮಾಧ್ಯಮದಲ್ಲಿ ಓದಿದ, ಗ್ರಾಮೀಣ ಭಾಗದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅವಕಾಶವನ್ನು ನೀಟ್‌ ದುರ್ಬಲಗೊಳಿಸುತ್ತಿದೆ' ಎಂದು ಪ್ರತಿಪಾದಿಸಿದರು.

ನಿರ್ಣಯವನ್ನು ಬೆಂಬಲಿಸಿ ಡಿಎಂಕೆ, ಎಐಎಡಿಎಂಕೆ, ಪಿಎಂಕೆ ಹಾಗೂ ಎಡಪಕ್ಷಗಳ ಸದಸ್ಯರು ಮಾತನಾಡಿದರು. ನಂತರ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಬಿಜೆಪಿಯ ಏಕೈಕ ಶಾಸಕ ಭೋಜರಾಜನ್‌ ಅವರು ನಿರ್ಣಯವನ್ನು ಖಂಡಿಸಿ ಸಭಾತ್ಯಾಗ ಮಾಡಿದರು.


ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು ಮಾತನಾಡಿದರು-‍ಪಿಟಿಐ ಚಿತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries